ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಜೀವ ಬೆದರಿಕೆ: ಆತ್ಮಾಹುತಿ ಸ್ಫೋಟದ ಎಚ್ಚರಿಕೆ - ಮುಖ್ಯಮಂತ್ರಿ ಹತ್ಯೆಗೆ ಸಂಚು

ದಸರಾ ರ‍್ಯಾಲಿ ಹೊಸ್ತಿಲಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.

death-threat-to-maharashtra-cm-eknath-shinde
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಜೀವ ಬೆದರಿಕೆ: ಆತ್ಮಾಹುತಿ ಸ್ಫೋಟದ ಎಚ್ಚರಿಕೆ

By

Published : Oct 2, 2022, 5:40 PM IST

ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಜೀವ ಬೆದರಿಕೆಯಿದ್ದು, ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಆತ್ಮಾಹುತಿ ಸ್ಫೋಟ ಮಾಡಿ ಮುಖ್ಯಮಂತ್ರಿ ಹತ್ಯೆಗೆ ಸಂಚು ನಡೆದಿದೆ ಎಂದೂ ಗುಪ್ತಚರ ಇಲಾಖೆ ತಿಳಿಸಿದೆ.

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಭದ್ರತೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷಾ ಹಾಗೂ ಥಾಣೆಯಲ್ಲಿ ಶಿಂಧೆ ಅವರ ನಿವಾಸಕ್ಕೂ ಹೆಚ್ಚಿನ ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ.

ಸುಮಾರು ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಕೊಲೆ ಬೆದರಿಕೆ ಪತ್ರವೊಂದು ಸಚಿವಾಲಯಕ್ಕೆ ಬಂದಿತ್ತು. ಈ ಬೆದರಿಕೆ ಪತ್ರವನ್ನು ಸ್ವೀಕರಿಸಿದ ನಂತರ, ಫೋನ್ ಕರೆ ಕೂಡ ಬಂದಿತ್ತು. ಆಗ ಮುಖ್ಯಮಂತ್ರಿಗಳಿಗೆ ಜೀವ ಬೆದರಿಕೆ ಹಾಕಲಾಗಿತ್ತು.

ಈ ಹಿಂದೆ ಸಚಿವರಾಗಿದ್ದಾಗಲೂ ಏಕನಾಥ್ ಶಿಂಧೆ ಅವರನ್ನು ಹತ್ಯೆ ಮಾಡುವುದಾಗಿ ಮಾವೋವಾದಿಗಳು ಬೆದರಿಕೆ ಹಾಕಿದ್ದರು. ಇದೇ 5ರಂದು ಮುಂಬೈನ ಬಿಕೆಸಿ ಮೈದಾನದಲ್ಲಿ ಏಕನಾಥ್ ಶಿಂಧೆ ಬಣದಿಂದ ದಸರಾ ರ‍್ಯಾಲಿ ಆಯೋಜಿಸಲಾಗಿದ್ದು, ನಾಲ್ಕೈದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ನವಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು

ABOUT THE AUTHOR

...view details