ನವದೆಹಲಿ/ಗಾಜಿಯಾಬಾದ್:ಮಕ್ಕಳ ಸರಣಿ ಹತ್ಯೆಗೆ ಕಾರಣವಾಗಿದ್ದ ಕುಖ್ಯಾತ ನಿಠಾರಿ ಪ್ರಕರಣಗಳಲ್ಲಿ ಸರಣಿ ಹಂತಕ ಸುರೇಂದ್ರ ಕೋಲಿಗೆ 16ನೇ ಪ್ರಕರಣದಲ್ಲೂ ದೋಷಿ ಎಂದು ಸಾಬೀತಾಗಿ ಮರಣದಂಡನೆ ವಿಧಿಸಲಾಗಿದೆ. ಇದು ಸುರೇಂದ್ರ ಕೋಲಿ ವಿರುದ್ಧದ 13 ನೇ ಮರಣದಂಡನೆ ಶಿಕ್ಷೆಯಾಗಿದೆ. ಈ ಮೂಲಕ ದೇಶದ ಇತಿಹಾಸಲ್ಲಿಯೇ ಅತ್ಯಧಿಕ ಮರಣದಂಡನೆಗೆ ಒಳಗಾದ ಹಂತಕನಾಗಿದ್ದಾನೆ.
ಗಾಜಿಯಾಬಾದ್ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ 16 ಪ್ರಕರಣಗಳಲ್ಲಿ 14 ನೇ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಶಿಕ್ಷೆಯನ್ನು ಕಾದಿರಿಸಿತ್ತು. ಇಂದು ಶಿಕ್ಷೆ ಪ್ರಕಟಿಸಿದ್ದು, ಸುರೇಂದ್ರ ಕೋಲಿಗೆ ಮತ್ತೊಂದು ಮರಣದಂಡನೆ ಶಿಕ್ಷೆ ವಿಧಿಸಿದರೆ, ಇನ್ನೊಬ್ಬ ಆರೋಪಿ ಮಣಿಂದರ್ ಸಿಂಗ್ ಪಂಧೇರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.