ಬರೇಲಿ (ಉತ್ತರ ಪ್ರದೇಶ): ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಉತ್ತರಪ್ರದೇಶ ಅಮರೋಹಿ ಜಿಲ್ಲೆಯ ಶಬ್ನಮ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ರಾಂಪುರ್ ಜೈಲಿನಿಂದ ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ಜೈಲಿನ ಅಧಿಕಾರಿಗಳು ತಮ್ಮ ಫೋನ್ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಕಂಡುಕೊಂಡ ನಂತರ ರಾಂಪುರ್ ಜೈಲಿನ ಇಬ್ಬರು ಗಾರ್ಡ್‌ಗಳನ್ನು ಸಹ ಅಮಾನತುಗೊಳಿಸಲಾಗಿದೆ.
ಈ ವರ್ಷ ಜನವರಿ 26 ರಂದು ಜೈಲು ಆವರಣದೊಳಗೆ ಚಿತ್ರಗಳನ್ನು ತೆಗೆಯಲಾಗಿದೆ ಎಂದು ಜೈಲು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. "ಇದು ಭದ್ರತೆಯ ಉಲ್ಲಂಘನೆ ಮತ್ತು ಜೈಲು ಕೈಪಿಡಿಯ ಉಲ್ಲಂಘನೆಯಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.