ಕರ್ನಾಟಕ

karnataka

ETV Bharat / bharat

ಮಗುವಿನ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಮರಣ ದಂಡನೆ ಶಿಕ್ಷೆ - ಮರಣ ದಂಡನೆ,

ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಉತ್ತರಪ್ರದೇಶದ ಹಾರ್ದೋಯಿ ಜಿಲ್ಲಾ ನ್ಯಾಯಾಲಯ ಆರೋಪಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Death penalty to accused in case of rape and murder of baby, Death penalty, Death penalty news, ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಪ್ರಕರಣಕ್ಕೆ ಮರಣದಂಡನೆ, ಮರಣ ದಂಡನೆ, ಮರಣ ದಂಡನೆ ಸುದ್ದಿ,
ಆರೋಪಿಯ ಚಿತ್ರ

By

Published : Feb 23, 2021, 8:30 AM IST

ಹಾರ್ದೋಯಿ:ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಆರೋಪಿಗೆ ಮರಣ ದಂಡನೆ ಶಿಕ್ಷೆ ನೀಡಿದೆ.

60 ವರ್ಷದ ಆರೋಪಿ ಗುಡ್ಡು ಅಲಿಯಾಸ್ ಗಬ್ಬು ಸುಮಾರು 7 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಶವವನ್ನು ಕೊಳಕ್ಕೆ ಎಸೆದಿದ್ದ. ಈ ಘಟನೆ ಬಗ್ಗೆ 2014ರಲ್ಲಿ ಗಬ್ಬು ವಿರುದ್ಧ ಮಗುವಿನ ಪೋಷಕರು ದೂರು ದಾಖಲಿಸಿದ್ದರು.

ಮಗುವಿನ ದೇಹವನ್ನು ಕೊಳದಿಂದ ವಶಪಡಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬ ವರದಿ ಬಂದಿತ್ತು. ಈ ಪ್ರಕರಣ ಸತತ ಏಳು ವರ್ಷಗಳು ನ್ಯಾಯಾದಲ್ಲಿತ್ತು. ವಾದ ವಿವಾದ ಪೂರ್ಣಗೊಂಡ ನಂತರ ಆರೋಪಿಗೆ ಪೋಕ್ಸೊ ನ್ಯಾಯಾಲಯದ ಮೇಲ್ ಜಿಲ್ಲಾ ನ್ಯಾಯಾಧೀಶ ಚಂದ್ರ ವಿಜಯ್ ಶ್ರೀನೆಟ್ 1 ಲಕ್ಷ ರೂ. ದಂಡ ಮತ್ತು ಮರಣ ದಂಡನೆ ಶಿಕ್ಷೆ ನೀಡಿ ಮಹತ್ವ ತೀರ್ಪು ಪ್ರಕಟಿಸಿದರು.

ಅತ್ಯಾಚಾರದ ಅಪರಾಧಿಗೆ ನೀಡಲಾದ ಮರಣದಂಡನೆ ಕುರಿತು ನ್ಯಾಯಾಲಯದ ತೀರ್ಪಿನ ಬಗ್ಗೆ ಮಗುವಿನ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಮಿಷನ್ ನಾರಿ ಶಕ್ತಿಯ ಅಡಿಯಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.

ABOUT THE AUTHOR

...view details