ಕರ್ನಾಟಕ

karnataka

ETV Bharat / bharat

ಮರಣದಂಡನೆ ಶಿಕ್ಷೆ ಮಾರ್ಗಸೂಚಿ ಪ್ರಕರಣ: ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ - ಮರಣ ದಂಡನೆಯ ಶಿಕ್ಷೆ

ಯಾವ ಸಂದರ್ಭಗಳಲ್ಲಿ ಮರಣ ದಂಡನೆಯ ಶಿಕ್ಷೆಯನ್ನು ಕಡಿಮೆ ಮಾಡಬಹುದು ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಮುಂದಾಗಿದ್ದು, ಇದರ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ನೀಡಲಾಗಿದೆ.

ಮರಣದಂಡನೆ ಶಿಕ್ಷೆ ಮಾರ್ಗಸೂಚಿ ಪ್ರಕರಣ
Death penalty SC refers to 5 judge bench

By

Published : Sep 19, 2022, 1:17 PM IST

ನವದೆಹಲಿ: ಗರಿಷ್ಠ ಮರಣ ದಂಡನೆ ವಿಧಿಸಬಹುದಾದ ಪ್ರಕರಣಗಳಲ್ಲಿ, ಯಾವ ಸಂದರ್ಭಗಳಲ್ಲಿ ಆ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬಹುದು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸುಮೋಟೊ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಇದರ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.

ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠ, ಗರಿಷ್ಠ ಮರಣದಂಡನೆಯನ್ನು ಎದುರಿಸುತ್ತಿರುವ ಪ್ರಕರಣದಲ್ಲಿ ಆರೋಪಿಗೆ ಯಾವ ಸಂದರ್ಭಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬಹುದು ಎಂಬ ವಿಷಯದಲ್ಲಿ ಸ್ಪಷ್ಟತೆ ಮತ್ತು ಏಕರೂಪದ ವಿಧಾನವನ್ನು ಹೊಂದಲು ವಿಸ್ತೃತ ಪೀಠದಿಂದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿತು.

ಈ ಸಂಬಂಧ ಆದೇಶಕ್ಕಾಗಿ ಸಿಜೆಐ ಮುಂದೆ ವಿಷಯವನ್ನು ಇರಿಸಲಿ ಎಂದು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ತೀರ್ಪು ಪ್ರಕಟಿಸುವಾಗ ಹೇಳಿದರು.

ಒಮ್ಮೆ ಮರಣದಂಡನೆ ಶಿಕ್ಷೆ ಜಾರಿಯಾದ ನಂತರ ಅದನ್ನೂ ಮತ್ತೆ ಯಾವತ್ತೂ ಬದಲಾಯಿಸಲಾಗುವುದಿಲ್ಲ ಮತ್ತು ಮರಣದಂಡನೆ ಶಿಕ್ಷೆ ವಿಧಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಆರೋಪಿಗೆ ಎಲ್ಲ ಅವಕಾಶಗಳನ್ನು ನೀಡಬೇಕು ಎಂದು ಪೀಠವು ಆಗಸ್ಟ್ 17 ರಂದು ತನ್ನ ತೀರ್ಪನ್ನು ಕಾಯ್ದಿರಿಸಿದಾಗ ಉಲ್ಲೇಖಿಸಿತ್ತು.

ಮರಣದಂಡನೆ ಶಿಕ್ಷೆಯನ್ನು ವಿಧಿಸುವಾಗ ಪರಿಗಣಿಸಬೇಕಾದ ಸಂಭಾವ್ಯ ಶಿಕ್ಷೆ ತಗ್ಗಿಸುವ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸುವುದು ಎಂದು ಈ ಪ್ರಕರಣಕ್ಕೆ ಹೆಸರಿಸಲಾಗಿದೆ.

ABOUT THE AUTHOR

...view details