ಕರ್ನಾಟಕ

karnataka

ETV Bharat / bharat

ಮರಣ ಪ್ರಮಾಣ ಪತ್ರ ಪಡೆದು ಆಸ್ತಿ ಕಬಳಿಸಿದ ಸಂಬಂಧಿಕರು.. ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋದ ಯುವಕ - ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋದ ರಾಜಸ್ಥಾನದ ಯುವಕ

5 ವರ್ಷ ಇರುವಾಗಲೇ ಮರಣ ಪ್ರಮಾಣ ಪತ್ರ ಪಡೆದು ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಸಂಬಂಧಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತನೊಬ್ಬ ಒತ್ತಾಯಿಸಿರುವ ಘಟನೆ ರಾಜಸ್ಥಾನದ ಭರತ್​ಪುರದಲ್ಲಿ ನಡೆದಿದೆ.

Death On Papers  rajasthan hindi news  bharatpur latest news  Mahesh Of Bharatpur Is Alive  Dead Man Of Bharatpur is Alive  Death On Kaagaz  ಆಸ್ತಿ ಮುಟ್ಟುಗೋಲು  ಮರಣ ಪ್ರಮಾಣ ಪತ್ರ  ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋದ ಯುವಕ
ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋದ ಯುವಕ

By

Published : Aug 4, 2022, 10:40 AM IST

Updated : Aug 4, 2022, 11:32 AM IST

ಭರತ್‌ಪುರ:ರಾಜಸ್ಥಾನದ ಶ್ರೀನಗರ ಗ್ರಾಮದ ಮಹೇಶ್ ಚಂದ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಪಿನಾ ಮಹಾವಾರ್​ಗೆ ದೂರು ಸಲ್ಲಿಸಿದ್ದಾರೆ. ಕೆಲ ಸಂಬಂಧಿಕರು ನಮ್ಮ ತಂದೆಗೆ ವಿಷಕೊಟ್ಟು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನನಗೆ ಐದು ವರ್ಷ ವಯಸ್ಸಾದಾಗಲೇ ಸಂಬಂಧಿಕರು ನನ್ನ ಮರಣ ಪತ್ರವನ್ನು ತೆಗೆಸಿ ಆಸ್ತಿಯನ್ನು ಲಪಟಾಯಿಸಿದ್ದಾರೆ ಎಂದು ಸಂತ್ರಸ್ತ ಉಲ್ಲೇಖಿಸಿದ್ದಾರೆ.

ನಮ್ಮ ಸಂಬಂಧಿಕರಾದ ಧರಂ ಸಿಂಗ್, ವೀರ್ ಸಿಂಗ್, ಗೋವರ್ಧನ್, ಧೀರಜ್ ಮತ್ತು ಶಿವಲಹರಿ ಶರ್ಮಾಸೇರಿ ಹಲವು ವರ್ಷಗಳ ಹಿಂದೆ ನನ್ನ ತಂದೆಗೆ ವಿಷಕೊಟ್ಟು ಕೊಲೆ ಮಾಡಿದ್ದಾರೆ. ನಾನು ಐದು ವರ್ಷದವರಾಗಿದ್ದಾಗ ಮರಣ ಪ್ರಮಾಣ ಪತ್ರ ಪಡೆದು ಆಸ್ತಿ ಲಪಾಟಾಯಿಸಿದ್ದಾರೆ ಎಂದು ಸಂತ್ರಸ್ತ ಯುವಕ ದೂರಿನ ಮೂಲಕ ತಿಳಿಸಿದ್ದಾರೆ.

2003ರಿಂದ ಅವರ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಇಷ್ಟು ವರ್ಷ ಜೀವನ ಕಳೆಯುತ್ತಿದೆ. ಇತ್ತೀಚೆಗಷ್ಟೇ ಅವರಿಂದ ತಪ್ಪಿಸಿಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ಈಗ ಬದುಕಿರುವ ಬಗ್ಗೆ ಸಾಬೀತುಪಡಿಸಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣರಾದ ಸಂಬಂಧಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹೇಶ್​ ಚಂದ್ ಒತ್ತಾಯಿಸಿದ್ದಾರೆ.

ಅದೇ ರೀತಿ ಉತ್ತರಾಖಂಡದಲ್ಲಿ ಸರ್ಕಾರಿ ನೌಕರರಿಂದ ವಂಚನೆಗೆ ಒಳಗಾಗಿ ಮರಣ ಪ್ರಮಾಣ ಪತ್ರ ನೀಡಿರುವ ಹರಿಕಿಶನ್ ಬದುಕಿರುವ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಈ ಎರಡೂ ಘಟನೆಗಳು ಕಳೆದ ವರ್ಷ ಬಿಡುಗಡೆಯಾದ "ಕಾಕಸ್" ಚಿತ್ರದ ಶೈಲಿಯಲ್ಲಿವೆ.

ಓದಿ:ಪೆನ್ಸಿಲ್, ಮ್ಯಾಗಿ ಬೆಲೆ ತುಟ್ಟಿಯಾಗಿದ್ದಕ್ಕೆ ಸಿಟ್ಟು.. ಪ್ರಧಾನಿಗೆ ಪತ್ರ ಬರೆದ 6ರ ಬಾಲೆ


Last Updated : Aug 4, 2022, 11:32 AM IST

ABOUT THE AUTHOR

...view details