ಕರ್ನಾಟಕ

karnataka

ETV Bharat / bharat

ಪ್ರಿಯತಮೆಯೊಂದಿಗೆ ತನಗೂ ಬೆಂಕಿ ಹಂಚಿಕೊಂಡಿದ್ದ ಯುವಕ ಸಾವು - etv bharat kannada

ಪ್ರೇಯಸಿ ಮೋಸ ಮಾಡಿದ್ದಾಳೆ ಎಂದು ಆಕೆಯೊಂದಿಗೆ ತನಗೂ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ.

death-of-that-young-man-who-set-fire-his-girl-friend
ಪ್ರಿಯತಮೆಯೊಂದಿಗೆ ತನಗೂ ಬೆಂಕಿ ಹಂಚಿಕೊಂಡಿದ್ದ ಯುವಕ ಸಾವು

By

Published : Nov 22, 2022, 5:22 PM IST

ಔರಂಗಾಬಾದ್ (ಮಹಾರಾಷ್ಟ್ರ): ಪ್ರಿಯತಮೆಯೊಂದಿಗೆ ತನಗೂ ಬೆಂಕಿ ಹಚ್ಚಿಕೊಂಡಿದ್ದ ಯುವಕ ಗಜಾನನ ಮುಂಡೆ ಸಾವನ್ನಪ್ಪಿದ್ದಾನೆ. ಆದರೆ ಯುವತಿ ಗಂಭಿರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಯುವಕ ಸಾಯುವ ಮುನ್ನ ಪ್ರೇಯಸಿ ತನಗೆ ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದ.

ಗಾಯಗೊಂಡಿರುವ ಪೂಜಾ ಸಾಳ್ವೆ ನನಗೆ ಮೋಸ ಮಾಡಿದ್ದಾಳೆ. ನಾವಿಬ್ಬರೂ ಪ್ರೀತಿಯಲ್ಲಿದ್ದೆವು. ಆಕೆಗಾಗಿ ನಾನು ಎರಡರಿಂದ ಎರಡೂವರೆಗೆ ಲಕ್ಷ ಖರ್ಚು ಮಾಡಿದ್ದೇನೆ. ಆದರೂ ಆಕೆಗೆ ನನ್ನ ಪ್ರೀತಿಯನ್ನು ಗುರುತಿಸಲಾಗಲಿಲ್ಲ. ನನಗೀಗ ಬದುಕಲು ಇಷ್ಟವಿಲ್ಲ ಮತ್ತು ಆಕೆಯನ್ನು ಬದುಕಲು ಬಿಡುವುದಿಲ್ಲ ಎಂದು ಸಾಯುವ ಮುನ್ನ ಪೊಲೀಸರಿಗೆ ತಿಳಿಸಿದ್ದಾನೆ.

ಈ ಕುರಿತು ಆತನ ಗೆಳೆಯರು ಕೂಡ ಗಜಾನನ ಪರವಾಗಿಯೇ ಮಾತನಾಡಿದ್ದಾರೆ. ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತು. ಸ್ವಲ್ಪ ಸಮಯದ ನಂತರ ಅವರಿಬ್ಬರ ಸಂಬಂಧ ಹದೆಗೆಟ್ಟಿದ್ದು, ಆತ ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಮುಂದಾಗಿದ್ದ ಎಂದಿದ್ದಾರೆ.

ಮತ್ತೊಂದೆಡೆ, ಗಜಾನನ ಯಾವಾಗಲೂ ನನಗೆ ತೊಂದರೆ ಕೊಡುತ್ತಿದ್ದ. ನಾವಿಬ್ಬರೂ ದೂರವಾದ ಬಳಿಕವೂ ಆತ ನನ್ನನ್ನು ಹಿಂಬಾಲಿಸುತ್ತಿದ್ದ. ನನಗೆ ಇಷ್ಟವಿಲ್ಲದಿದ್ದರೂ, ಮಾತನಾಡಲು ಪ್ರಯತ್ನಿಸುತ್ತಿದ್ದ ಎಂದು ಪೂಜಾ ಪೊಲೀಸರಿಗೆ ದೂರು ದಾಖಲಿಸಿದ್ದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಇಸ್ಲಾಂಗೆ ಮತಾಂತರವಾಗದ ಯುವಕನ ಮೇಲೆ ಹಲ್ಲೆ: ದೂರು

ABOUT THE AUTHOR

...view details