ಜಲಾಲಾಬಾದ್ (ಪಂಜಾಬ್): ಪಂಜಾಬ್‌ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಜಲಾಲಾಬಾದ್ನಲ್ಲಿ ಈ ದಾಳಿ ಘಟನೆ ನಡೆದಿದ್ದು, ಇದರಲ್ಲಿ ಶಾಸಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾಸಕ ಜಗದೀಪ್ ಗೋಲ್ಡಿ ಕಾಂಬೋಜ್ ದಾಳಿಗೆ ಒಳಗಾದ ಶಾಸಕರಾಗಿದ್ದು, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆ ಕಲ್ಲು, ಇಟ್ಟಿಗೆಗಳಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಮೂವರು ಆರೋಪಿಗಳು ಮತ್ತು 10ರಿಂದ 15 ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಶಾಸಕ ಜಗದೀಪ್ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಸರ್ಕಾರದ ಅನುದಾನ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಸ್ಥಳದಲ್ಲಿದ್ದ ನಿಶಾನ್ ಸಿಂಗ್ ಎಂಬುವರು ತಿಳಿಸಿದರು. ಆಗ ನಿಶಾನ್ ಸಿಂಗ್ ವಿರುದ್ಧವೇ ಆರೋಪಿಗಳು ಅಸಭ್ಯ ಭಾಷೆ ಬಳಸಿ ಥಳಿಸಲು ಶುರು ಮಾಡಿದರು. ಅಲ್ಲದೇ, ಸ್ಥಳದಲ್ಲಿದ್ದ ಶಾಸಕರ ಮೇಲೂ ದಾಳಿ ಮಾಡಿದರು ಎಂದು ಹೇಳಲಾಗಿದೆ.
ಸದ್ಯ ಜಸ್ವಿಂದರ್ ಸಿಂಗ್, ಜಗದೀಪ್ ಸಿಂಗ್ ಮತ್ತು ಹರ್ಬ್ಲಾಸ್ ಸಿಂಗ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ಸೇತುವೆಯಿಂದ 30 ಅಡಿ ಆಳಕ್ಕೆ ಬಿದ್ದ ಬಿಜೆಪಿ ಶಾಸಕ ಪ್ರಯಾಣಿಸುತ್ತಿದ್ದ ಕಾರು - ವಿಡಿಯೋ