ಚಮೋಲಿ, ಉತ್ತರಾಖಂಡ್:ಸುಮಾರು ಒಂದು ವರ್ಷದ ಹಿಂದೆ ನಡೆದ ಚಮೋಲಿ ದುರಂತದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿದ್ದಾನೆ. ಚಮೋಲಿ ಪ್ರವಾಹದ ವೇಳೆ ರೈನಿ ಗ್ರಾಮದಲ್ಲಿಈ ವ್ಯಕ್ತಿ ದುರಂತದ ವೇಳೆ ನಾಪತ್ತೆಯಾಗಿದ್ದನು.
ಮೃತದೇಹ ತಪೋವನ ಸುರಂಗದಲ್ಲಿ ಪತ್ತೆಯಾಗಿದ್ದು, ವ್ಯಕ್ತಿಯನ್ನು 21 ವರ್ಷದ ರೋಹಿತ್ ಭಂಡಾರಿ ಎಂದು ಗುರ್ತಿಸಲಾಗಿದೆ. ಜೋಶಿಮಠದ ಕಿಮನಾ ಗ್ರಾಮದ ನಿವಾಸಿಯಾಗಿರುವ ಈತ ನೀರಿನಲ್ಲಿ ಕೊಚ್ಚಿ ಹೋಗಿದ್ದನು.
ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದ್ದಾರೆ. ಇದಕ್ಕೂ ಮುನ್ನ ಫೆಬ್ರವರಿ 16ರಂದು ಗೌರವ್ ಪ್ರಸಾದ್ ಎಂಬುವವರ ಮೃತದೇಹ ಸುರಂಗವೊಂದರಲ್ಲಿ ಪತ್ತೆಯಾಗಿತ್ತು.