ಪಿಲಿಭಿತ್ (ಉತ್ತರ ಪ್ರದೇಶ): ಜಿಲ್ಲೆಯ ಪೂರನ್ಪುರ್ ಪ್ರದೇಶದಿಂದ ಕೆಲ ದಿನಗಳ ಹಿಂದೆ ದೆಹಲಿ ಕಿಸಾನ್ ಆಂದೋಲನಕ್ಕೆ ಸೇರಲು ಹೋಗಿದ್ದ ಬಲ್ಜಿಂದರ್ ಸಿಂಗ್ (32) ನಿಗೂಢವಾಗಿ ಕಣ್ಮರೆಯಾಗಿದ್ದ.
ದೆಹಲಿ ಕಿಸಾನ್ ಆಂದೋಲನಕ್ಕೆ ಸೇರಲು ಹೋಗಿದ್ದ ಯುವಕನ ಶವ ಪತ್ತೆ! - ದೆಹಲಿ ಕಿಸಾನ್ ಆಂದೋಲನ
ದೆಹಲಿ ಕಿಸಾನ್ ಆಂದೋಲನಕ್ಕೆ ಸೇರಲು ಹೋಗಿದ್ದ ಯುವಕನೊಬ್ಬನ ಶವ ಪತ್ತೆಯಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
dead
ಎಷ್ಟೇ ಕಾರ್ಯಾಚರಣೆ ನಡೆಸಿದರೂ ಆತನನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಬಳಿಕ ಫೆಬ್ರವರಿ 1ರಂದು ಗಾಜಿಪುರ ಪೊಲೀಸ್ ಠಾಣಾ ಪ್ರದೇಶದಲ್ಲಿ ಆತನ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ.
ಯಾವುದೋ ವಾಹನ ಗುದ್ದಿದ ಪರಿಣಾಮ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.
Last Updated : Feb 3, 2021, 1:35 PM IST