ಕರ್ನಾಟಕ

karnataka

ETV Bharat / bharat

ಬ್ರಿಟಿಷರು ನಿರ್ಮಿಸಿದ 100 ವರ್ಷ ಹಳೆಯ ರೋಶನಾರಾ ಕ್ಲಬ್‌ಗೆ ಡಿಡಿಎ ಸೀಲ್​

ಶುಕ್ರವಾರ ಬೆಳಗ್ಗೆ ರೋಶನಾರಾ ಕ್ಲಬ್‌ಗೆ ದೆಹಲಿ ಅಭಿವೃದ್ದಿ ಪ್ರಾಧಿಕಾರ ಸೀಲ್ ಹಾಕಿದೆ.

ರೋಶನಾರಾ ಕ್ಲಬ್‌ ಸೀಲ್​
ರೋಶನಾರಾ ಕ್ಲಬ್‌ ಸೀಲ್​

By ETV Bharat Karnataka Team

Published : Sep 29, 2023, 9:05 PM IST

Updated : Sep 29, 2023, 9:21 PM IST

ನವದೆಹಲಿ :ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ರೋಶನಾರಾ ಕ್ಲಬ್‌ಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಸೀಲಿಂಗ್​ ಮಾಡಿದೆ. 1922 ರಲ್ಲಿ ಬ್ರಿಟಿಷರು ನಿರ್ಮಿಸಿರುವ ಕ್ಲಬ್‌ ಇದಾಗಿದ್ದು, ಗುತ್ತಿಗೆ ಮುಗಿದ ನಂತರ ನ್ಯಾಯಾಲಯವು ಕ್ಲಬ್​ ಸೀಲ್ ಮಾಡಲು ಡಿಡಿಎ ಗೆ ಆದೇಶಿಸಿದೆ ಎಂದು ಹೇಳಲಾಗುತ್ತಿದೆ. ಕ್ಲಬ್​ ಬಳಿ ಪದಾಧಿಕಾರಿಗಳು ಮತ್ತು ಉದ್ಯೋಗಿಗಳು ಆಗಮಿಸಿದ್ದು, ದೆಹಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಯಾರನ್ನೂ ಒಳಗೆ ಹೋಗಲು ಬಿಟ್ಟಿಲ್ಲ.

ರೋಶನಾರಾ ಕ್ಲಬ್‌ನ ಇತಿಹಾಸವು ಸಾಕಷ್ಟು ಸ್ಮರಣೀಯವಾಗಿದೆ. 1928 ರಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನ್ನು ಈ ಕ್ಲಬ್‌ನಲ್ಲಿಯೇ ಒಂದು ಸೊಸೈಟಿಯಾಗಿ ಸ್ಥಾಪಿಸಲಾಗಿತ್ತು. ಬಳಿಕ 1931 ರಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಇದೇ ಕ್ಲಬ್​ನ ಮೈದಾನದಲ್ಲಿ ನಡೆದಿತ್ತು ಎಂಬುದು ಗಮನಾರ್ಹ ವಿಚಾರ. ಅಷ್ಟೇ ಅಲ್ಲದೆ, ಆನೇಕ ರಣಜಿ ಪಂದ್ಯಗಳನ್ನೂ ಈ ಕ್ಲಬ್​​ನ ಮೈದಾನದಲ್ಲೇ ಆಯೋಜಿಸಲಾಗಿತ್ತು.

ಸುಮಾರು 23.25 ಎಕರೆ ಪ್ರದೇಶದಲ್ಲಿ ತನ್ನ ವಿಸ್ತಾರವನ್ನು ಹೊಂದಿರುವ ಈ ಕ್ಲಬ್ ಅನ್ನು ದೆಹಲಿ ಕ್ರಿಕೆಟ್‌ಗೆ ಒಂದು ಶ್ರೇಷ್ಠ ಮೈಲಿಗಲ್ಲು ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ಲಬ್ ಅನ್ನು ಸೀಲಿಂಗ್ ಮಾಡಲಾಗಿದೆ. ಹೀಗೆ ಮಾಡಿರುವುದರಿಂದ ಕ್ರಿಕೆಟ್‌ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕ್ಲಬ್‌ನೊಂದಿಗೆ ಅನೇಕ ನೆನಪುಗಳು ಇದ್ದು, ಅನೇಕ ಸ್ಮರಣೀಯ ದೇಶೀಯ ಪಂದ್ಯಗಳನ್ನು ಈ ಕ್ಲಬ್​​ನ ಮೈದಾನದಲ್ಲಿ ಆಡಲಾಗಿದೆ. ಕ್ಲಬ್‌ನ ಮುಚ್ಚುವಿಕೆಯು ಇಲ್ಲಿ ಕಾರ್ಯನಿರ್ವಹಿಸುತ್ತಿರುವ 450 ಉದ್ಯೋಗಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಅವರು ಜೀವನೋಪಾಯದ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇನ್ನೊಂದೆಡೆ ಕ್ರಿಕೆಟ್‌ಗೆ ಕರಾಳ ದಿನ ಎಂದು ಕ್ಲಬ್‌ನ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸೀಲ್​ : ರೋಶನಾರಾ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ರಾಜಣ್ಣ ಮಂಚಂದ ಮಾತನಾಡಿ, ಅಕ್ಟೋಬರ್ 6 ರವರೆಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಆದರೂ ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಹೆಚ್ಚಿನ ಸಂಖ್ಯೆಯ ಡಿಡಿಎ ಅಧಿಕಾರಿಗಳು ಬಂದು ಕ್ಲಬ್ ಸೀಲ್ ಮಾಡಿದ್ದಾರೆ. ಇದೀಗ ಕ್ಲಬ್‌ನ ಪದಾಧಿಕಾರಿಗಳು ಈ ಕುರಿತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಅರುಣಾಚಲ ಪ್ರದೇಶ ಆಟಗಾರರಿಗೆ ಏಷ್ಯನ್ ಗೇಮ್ಸ್​ನಲ್ಲಿ ಭಾಗವಹಿಸಲು ಚೀನಾ ತಕರಾರು.. ರಾಜಕೀಯ, ಕ್ರೀಡೆ ಪ್ರತ್ಯೇಕವಾಗಿಡಬೇಕು ಎಂದ ಒಸಿಎ ಹಂಗಾಮಿ ಅಧ್ಯಕ್ಷ

Last Updated : Sep 29, 2023, 9:21 PM IST

ABOUT THE AUTHOR

...view details