ನವದೆಹಲಿ :ಟ್ವಿಟರ್ ಟೂಲ್ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನಕ್ಕೊಳಗಾಗಿದ್ದು, ಈ ಕುರಿತಂತೆ ದೆಹಲಿ ಮಹಿಳಾ ಆಯೋಗ, ದೆಹಲಿ ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಷನರ್ಗೆ ನೋಟಿಸ್ ಜಾರಿ ಮಾಡಿದೆ.
ಟೂಲ್ಕಿಟ್ ವಿವಾದದಲ್ಲಿ ದಿಶಾ ರವಿ ಬಂಧನ:ದೆಹಲಿ ಪೊಲೀಸ್ಗೆ ಮಹಿಳಾ ಆಯೋಗ ನೋಟಿಸ್..! - farmers protest in hyderbad
ದಿಶಾ ರವಿ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಷನರ್ಗೆ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಿದೆ..
ದಿಶಾ ರವಿ
ನೋಟಿಸ್ನೊಂದಿಗೆ ದಿಶಾ ರವಿ ವಿರುದ್ಧ ಹಾಕಲಾದ ಎಫ್ಐಆರ್ ಒದಗಿಸಬೇಕೆಂದು ಮತ್ತು ಆಕೆಯನ್ನು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸದಿರಲು ಕಾರಣವೇನೆಂಬುದನ್ನು ವಿವರಿಸಬೇಕೆಂದು ಹಾಗೂ ಆಕೆಯ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳಗಳ ಬಗ್ಗೆ ಪೂರ್ಣ ವರದಿ ನೀಡಬೇಕೆಂದು ಸೂಚನೆ ನೀಡಲಾಗಿದೆ.