ಕರ್ನಾಟಕ

karnataka

ETV Bharat / bharat

3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಸೇವೆಗೆ ಬೇಡ ಎಂದ ಎಸ್​​ಬಿಐಗೆ ಮಹಿಳಾ ಆಯೋಗ ನೋಟಿಸ್​.. - ಎಸ್​​ಬಿಐಗೆ ದೆಹಲಿ ಮಹಿಳಾ ಆಯೋಗ ನೋಟಿಸ್​

ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರು ಸೇವೆಗೆ ಸೇರ್ಪಡೆಗೊಳ್ಳಲು ತಾತ್ಕಾಲಿಕವಾಗಿ ಅನರ್ಹರು ಹಾಗೂ ಹೆರಿಗೆಯಾದ ನಾಲ್ಕು ತಿಂಗಳೊಳಗೆ ಸೇವೆಗೆ ಅನುಮತಿಸಲಾಗುವುದು ಎಂದು ಮಾರ್ಗಸೂಚಿ ಹೊರಡಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ದೆಹಲಿ ಮಹಿಳಾ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ.

sbi
ಎಸ್​​ಬಿಐಗೆ ಮಹಿಳಾ ಆಯೋಗ ನೋಟಿಸ್

By

Published : Jan 29, 2022, 1:36 PM IST

ನವದೆಹಲಿ:ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರನ್ನು ಕೆಲಸಕ್ಕೆ ಸೇರದಂತೆ ತಡೆದಿದ್ದಕ್ಕಾಗಿ ದೆಹಲಿ ಮಹಿಳಾ ಆಯೋಗವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ನೋಟಿಸ್ ಜಾರಿ ಮಾಡಿದೆ.

"ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರು ಸೇವೆಗೆ ಸೇರದಂತೆ ತಡೆಯುವ ಮಾರ್ಗಸೂಚಿಗಳನ್ನು ಎಸ್​​ಬಿಐ ಹೊರಡಿಸಿದೆ ಹಾಗೂ ಅವರನ್ನು 'ತಾತ್ಕಾಲಿಕವಾಗಿ ಅನರ್ಹ' ಎಂದು ಕರೆದಿದೆ. ಇದು ತಾರತಮ್ಯ ಮತ್ತು ಕಾನೂನುಬಾಹಿರವಾಗಿದೆ. ಈ ಮಹಳಾ ವಿರೋಧಿ ನೀತಿ ಹಿಂಪಡೆಯುವಂತೆ ನಾವು ಅವರಿಗೆ ನೋಟಿಸ್ ನೀಡಿದ್ದೇವೆ" ಎಂದು ದೆಹಲಿ ಮಹಿಳಾ ಆಯೋಗದ (DCW) ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 31 ಎಸ್​​ಬಿಐ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಸರಿಯಾದ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ಮಹಿಳೆಯರನ್ನೂ (3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು) ಕೆಲಸಕ್ಕೆ ಸೇರುವುದನ್ನು ತಡೆದಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಯು ತಕ್ಷಣವೇ ಸೇರ್ಪಡೆಗೊಳ್ಳುವಂತಿಲ್ಲ. ಅವರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಲ್ಲದೇ, ಹೆರಿಗೆಯಾದ ನಾಲ್ಕು ತಿಂಗಳೊಳಗೆ ಸೇವೆಗೆ ಅನುಮತಿಸಲಾಗುವುದು ಎಂದು ಉಲ್ಲೇಖಿಸಿದೆ.

ಎಸ್​​ಬಿಐಗೆ ಮಹಿಳಾ ಆಯೋಗ ನೋಟಿಸ್

ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಬ್ಯಾಂಕಿನ ಈ ಕ್ರಮವು ಇದು ತುಂಬಾ ಗಂಭೀರವಾದ ವಿಷಯವಾಗಿದೆ ಕಾನೂನಿನ ಅಡಿ (ಸಾಮಾಜಿಕ ಭದ್ರತೆ ಸಂಹಿತೆ, 2020) ಒದಗಿಸಲಾದ ಹೆರಿಗೆ ಪ್ರಯೋಜನಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಕರ್ನಾಟಕ ಬ್ಯಾಂಕ್‌ಗೆ 146 ಕೋಟಿ ರೂ.ಲಾಭ

ಮೊದಲು, ಆರು ತಿಂಗಳ ಗರ್ಭಿಣಿ ಮಹಿಳಾ ಅಭ್ಯರ್ಥಿಗಳು ಕೆಲವು ಷರತ್ತುಗಳ ಅಡಿಯಲ್ಲಿ ಎಸ್‌ಬಿಐಗೆ ಸೇರಲು ಅವಕಾಶವಿತ್ತು. ಆದರೆ, ಆ ಹಂತದಲ್ಲಿ ಉದ್ಯೋಗವನ್ನು ತೆಗೆದುಕೊಳ್ಳುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ತ್ರೀರೋಗತಜ್ಞರಿಂದ ಪಡೆದ ಪ್ರಮಾಣಪತ್ರವನ್ನು ಒದಗಿಸಬೇಕಿತ್ತು.

ಇನ್ನು ದೆಹಲಿ ಮಹಿಳಾ ಆಯೋಗ ನೀಡಿದ ನೋಟಿಸ್​ಗೆ ಭಾರತೀಯ ಸ್ಟೇಟ್​ ಬ್ಯಾಂಕ್​ ಇನ್ನೂ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಮಂಗಳವಾರದೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಎಸ್‌ಬಿಐಗೆ ಡಿಸಿಡಬ್ಲ್ಯು ಸೂಚಿಸಿದೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details