ಕರ್ನಾಟಕ

karnataka

ETV Bharat / bharat

ಬೆಳಗ್ಗೆ 11ಕ್ಕೆ ಕೋವಿಡ್-19 ಲಸಿಕೆ ಕುರಿತು ಡಿಸಿಜಿಐನಿಂದ ಸುದ್ದಿಗೋಷ್ಠಿ - ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ

ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ, ವಿಶೇಷವಾಗಿ ರೂಪಾಂತರ ತಳಿಗಳಿಂದ ಸೋಂಕಿನ ಸಂದರ್ಭದಲ್ಲಿ, ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಹೈದರಾಬಾದ್‌ಗೆ, ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡುವಂತೆ ಇದು ಶಿಫಾರಸು ಮಾಡಿದೆ..

DCGI to brief media today on COVID-19 vaccine
ಕೋವಿಡ್-19 ಲಸಿಕೆ ಕುರಿತು ಮಾಹಿತಿ ನೀಡಲಿರುವ ಡಿಸಿಜಿಐ

By

Published : Jan 3, 2021, 9:41 AM IST

ನವದೆಹಲಿ :ಕೊರೊನಾ ವೈರಸ್ ಲಸಿಕೆ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಇಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಲಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ ಲಸಿಕೆಗಳ ನಿರ್ಬಂಧಿತ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಷನ್‌ನ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್‌ಗೆ ಶಿಫಾರಸು ಮಾಡಿತ್ತು.

ಅಧಿಕೃತ ಬಿಡುಗಡೆಯ ಪ್ರಕಾರ, ಎಸ್‌ಇಸಿ ಶುಕ್ರವಾರ ಮತ್ತು ಶನಿವಾರ ಸಭೆ ಸೇರಿ ಎಸ್‌ಐಐ, ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ತ್ವರಿತ ಅನುಮೋದನೆ ಪ್ರಕ್ರಿಯೆಯ ಕೋರಿಕೆಗೆ ಸಂಬಂಧಿಸಿದಂತೆ ಮತ್ತು ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ 3ನೇ ಹಂತದ ಪ್ರಯೋಗಗಳ ಬಗ್ಗೆ ತನ್ನ ಶಿಫಾರಸುಗಳನ್ನು ಮಾಡಿದೆ.

ಲಸಿಕೆಯ ನಿರ್ಬಂಧಿತ ತುರ್ತು ಬಳಕೆಗೆ ಅನುಮತಿ ನೀಡುವಂತೆ ವಿಷಯ ತಜ್ಞರ ಸಮಿತಿಯು ಬಹು ನಿಯಂತ್ರಕ ಷರತ್ತುಗಳಿಗೆ ಒಳಪಟ್ಟು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಶಿಫಾರಸು ಮಾಡಿದೆ.

ಕ್ಲಿನಿಕಲ್ ಟ್ರಯಲ್ ಮೋಡ್‌ನಲ್ಲಿ, ವಿಶೇಷವಾಗಿ ರೂಪಾಂತರ ತಳಿಗಳಿಂದ ಸೋಂಕಿನ ಸಂದರ್ಭದಲ್ಲಿ, ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಹೈದರಾಬಾದ್‌ಗೆ, ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡುವಂತೆ ಇದು ಶಿಫಾರಸು ಮಾಡಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಪರಿಗಣನೆ ಮತ್ತು ಅಂತಿಮ ನಿರ್ಧಾರಕ್ಕಾಗಿ ಶಿಫಾರಸುಗಳನ್ನು ಮಾಡಲಾಗಿದೆ. ಕೋವಾಕ್ಸಿನ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆಯಾಗಿದೆ.

ABOUT THE AUTHOR

...view details