ನವದೆಹಲಿ:ತಜ್ಞರ ಸಮಿತಿ ಅನುಮೋದನೆ ನೀಡಿದ ಬೆನ್ನಲ್ಲೇ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಕೂಡ ಸಮ್ಮತಿ ಸೂಚಿಸಿದೆ. ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ ಅನುಮತಿ ನೀಡಿದ 60ನೇ ದೇಶ ಭಾರತವಾಗಿದೆ.
ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರಿ ಸಹಯೋಗದೊಂದಿಗೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಡಾ. ರೆಡ್ಡೀಸ್ ಲ್ಯಾಬ್ ಭಾರತದಲ್ಲಿ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆ. ದೇಶದಲ್ಲಿ ಲಸಿಕೆಯ ತುರ್ತು ಬಳಕೆ ಅನುಮತಿ ನೀಡುವಂತೆ ಡಾ. ರೆಡ್ಡೀಸ್ ಲ್ಯಾಬ್ ಸಲ್ಲಿಸಿದ್ದ ಅರ್ಜಿಯನ್ನು ತಜ್ಞರ ಸಮಿತಿ ನಿನ್ನೆ ಅನುಮೋದಿಸಿತ್ತು. ಇದೀಗ ಡಿಸಿಜಿಐನಿಂದಲೂ ಅನುಮೋದನೆ ಸಿಕ್ಕಿದೆ.