ನವದೆಹಲಿ :ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಅನುಮೋದನೆ ನೀಡಿದೆ. ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆಯ ಇಂಟ್ರಾನಸಲ್ ಕೋವಿಡ್ ಬೂಸ್ಟರ್ ಡೋಸ್ ಅಭಿವೃದ್ಧಿಪಡಿಸಿದ್ದು, ಇದನ್ನ ಮೂಗಿನ ಮೂಲಕ ನೀಡಲಾಗುವುದು.
ಭಾರತ್ ಬಯೋಟೆಕ್ನ ಇಂಟ್ರಾ ನಸಲ್ ಕೋವಿಡ್ ಬೂಸ್ಟರ್ ಡೋಸ್ ಪ್ರಯೋಗಕ್ಕೆ ಅನುಮೋದನೆ - Covid-19 intranasal vaccine
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೊರೊನಾ ವೈರಸ್ ಮೂಗಿನ ಮೂಲಕವೇ ದೇಹಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದೆ. ಹೀಗಾಗಿ, ಇದೀಗ ಇಂಟ್ರಾನಾಸಲ್ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ತಿಳಿದು ಬಂದಿದೆ..

intranasal booster dose trials
ಭಾರತ್ ಬಯೋಟೆಕ್ನಿಂದ ಈಗಾಗಲೇ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಇದೀಗ ಬೂಸ್ಟರ್ ಡೋಸ್ ನೀಡಲು 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ನೀಡಲಾಗಿದೆ. ದೇಶದ 9 ಸ್ಥಳಗಳಲ್ಲಿ ಇದರ ಪ್ರಯೋಗ ನಡೆಸಲಾಗುವುದು ಎಂದು ತಿಳಿದು ಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೊರೊನಾ ವೈರಸ್ ಮೂಗಿನ ಮೂಲಕವೇ ದೇಹಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದೆ. ಹೀಗಾಗಿ, ಇದೀಗ ಇಂಟ್ರಾನಾಸಲ್ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ತಿಳಿದು ಬಂದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
Last Updated : Jan 28, 2022, 5:13 PM IST