ಕರ್ನಾಟಕ

karnataka

ETV Bharat / bharat

2-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ: ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತ್ ಬಯೋಟೆಕ್‌ಗೆ DCGI ಒಪ್ಪಿಗೆ

ವಯಸ್ಕರ ಬಳಿಕ ಮಕ್ಕಳಿಗಾಗಿ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ದಿಪಡಿಸಿದ್ದು, ಇದರ 2-3 ಹಂತದ ಕ್ಲಿನಿಕಲ್ ಪ್ರಯೋಗ ಅನುಮತಿ ದೊರೆತಿದೆ.

DCGI approves
ಡಿಸಿಜಿಐ ಅನುಮೋದನೆ

By

Published : May 13, 2021, 12:01 PM IST

ನವದೆಹಲಿ: 2 ರಿಂದ 18 ವರ್ಷದೊಳಗಿನವರಿಗಾಗಿ ಸಿದ್ದಪಡಿಸಲಾದ ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ 2 ಮತ್ತು 3 ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

ದೆಹಲಿ ಏಮ್ಸ್, ಪಾಟ್ನಾ ಏಮ್ಸ್​ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ಸ್​ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ನ ಸುಮಾರು 525 ಆರೋಗ್ಯವಂತ ಸ್ವಯಂಸೇವಕರ ಮೇಲೆ ಭಾರತ್ ಬಯೋಟೆಕ್ ಲಸಿಕೆ ಪ್ರಯೋಗ ಮಾಡಲಿದೆ.

ಕೋವಿಡ್​ ಸೋಂಕನ್ನು ತ್ವರಿತವಾಗಿ ನಿಯಂತ್ರಿಸುವ ಸಲುವಾಗಿ, ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಈ ವಿಷಯವನ್ನು ವಿವರವಾಗಿ ಚರ್ಚಿಸಿದ ಬಳಿಕ ಕೆಲವು ಷರತ್ತುಗಳೊಂದಿಗೆ ಪ್ರಸ್ತಾವಿತ ಹಂತ 2 ಮತ್ತು 3 ರ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಲು ಶಿಫಾರಸು ಮಾಡಿದೆ.

ಇದನ್ನೂಓದಿ: ರೋಗಿಗಳ ಸೇವೆಯಲ್ಲಿದ್ದಾಗ ಸೋಂಕು ತಗುಲಿ 40 ನರ್ಸ್‌ಗಳು ಸಾವು

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ ಬಳಸಲಾಗುತ್ತಿದೆ.

ABOUT THE AUTHOR

...view details