ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದ್ದು, ಇದೀಗ ಬಿಜೆಪಿ-ಟಿಎಂಸಿ ನಡುವಿನ ಆರೋಪ-ಪ್ರತ್ಯಾರೋಪಗಳು ಬಲು ಜೋರಾಗಿ ನಡೆಯುತ್ತಿವೆ. ನಿನ್ನೆಯಷ್ಟೇ ಮಮತಾ ಬ್ಯಾನರ್ಜಿ ಮೇಲೆ ನಮೋ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ದೀದಿ ತಿರುಗೇಟು ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಮತಾ ಬ್ಯಾನರ್ಜಿ, ಈಗಾಗಲೇ ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಮೋದಿ ಚಿತ್ರವಿದೆ. ಅವರ ಹೆಸರಿನಲ್ಲಿ ಕಾಲೇಜುಗಳಿವೆ, ಕ್ರೀಡಾಂಗಣಕ್ಕೆ ನಮೋ ಹೆಸರು ಇಡಲಾಗಿದೆ. ದೇಶದಲ್ಲಿ ಲಭ್ಯವಾಗುತ್ತಿರುವುದು ಕೋವಿಡ್ ಲಸಿಕೆ ಅಲ್ಲ, ಮೋದಿ ಲಸಿಕೆ ಎಂದು ವಾಗ್ದಾಳಿ ನಡೆಸಿರುವ ದೀದಿ, ದೇಶದ ಹೆಸರು ನರೇಂದ್ರ ಮೋದಿ ಎಂದು ಬದಲಾಯಿಸುವ ದಿನಗಳು ದೂರ ಇಲ್ಲ ಎಂದು ಕಿಡಿಕಾರಿದ್ದಾರೆ.