ಕರ್ನಾಟಕ

karnataka

ETV Bharat / bharat

ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಗೆ ಉತ್ತರಾಧಿಕಾರಿಯಾಗಲು ಹೆಣ್ಣು ಮಕ್ಕಳು ಅರ್ಹರು.. ಸುಪ್ರೀಂಕೋರ್ಟ್‌ ತೀರ್ಪು - Daughters to inherit father's self-acquired property if no will says SC

ಯಾವುದೇ ಕಾನೂನುಬದ್ಧ ಉತ್ತರಾಧಿಕಾರಿಯ ಅನುಪಸ್ಥಿತಿಯಲ್ಲಿ, ತನ್ನ ತಂದೆಯ ಸ್ವಯಂ ಸಂಪಾದಿತ ಆಸ್ತಿಯನ್ನು ಉತ್ತರಾಧಿಕಾರವಾಗಿ ಪಡೆಯುವ ಮಗಳ ಹಕ್ಕಿಗೆ ಸಂಬಂಧಿಸಿದ ಕಾನೂನು ಸಮಸ್ಯೆಯನ್ನು ಪೀಠವು ಪ್ರಸ್ತಾಪ ಮಾಡಿದೆ..

Daughters to inherit father's self-acquired property if no will: SC
ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಗೆ ಉತ್ತರಾಧಿಕಾರಿಯಾಗಲು ಹೆಣ್ಣು ಮಕ್ಕಳು ಅರ್ಹರು - ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

By

Published : Jan 21, 2022, 2:26 PM IST

ನವದೆಹಲಿ :ಹಿಂದು ವ್ಯಕ್ತಿಗಳ ಹೆಣ್ಣು ಮಕ್ಕಳು ತಂದೆಯ ವಿಭಜನೆಯಲ್ಲಿ ಪಡೆದ ಸ್ವಯಾರ್ಜಿತ ಮತ್ತು ಇತರೆ ಆಸ್ತಿಗಳಿಗೆ ಉತ್ತರಾಧಿಕಾರಿಯಾಗಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ವಿಭಾಗೀಯ ಪೀಠ, ಹಿಂದೂ ಉತ್ತರಾಧಿಕಾರ ಕಾಯ್ದೆಯಡಿಯಲ್ಲಿ ಹಿಂದೂ ಮಹಿಳೆಯರು ಮತ್ತು ವಿಧವೆಯರ ಆಸ್ತಿ ಹಕ್ಕುಗಳ ಅಡಿಯಲ್ಲಿ ಈ ಆದೇಶ ನೀಡಿದ್ದಾರೆ.

ವಿಲ್‌ ಬರೆಯದೆ ಮೃತಪಟ್ಟ ಹಿಂದೂ ವ್ಯಕ್ತಿಯದ್ದು ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿಯಾಗಿದ್ದರೆ ಅಥವಾ ಕುಟುಂಬದ ಆಸ್ತಿಯ ವಿಭಜನೆಯಲ್ಲಿ ಪಡೆದ ಆಸ್ತಿಯಾಗಿದ್ದರೆ ಆನುವಂಶಿಕವಾಗಿ ಆ ಆಸ್ತಿ ಪಡೆಯಲು ಪುತ್ರಿಗೆ ಅಧಿಕಾರ ಇರುತ್ತದೆ. (ಉದಾಹರಣೆಗೆ ಮೃತಪಟ್ಟ ತಂದೆಯ ಸಹೋದರರ ಪುತ್ರರು/ಪುತ್ರಿಯರು) ಆಗಿರಬಹುದು ಎಂದು ಕೋರ್ಟ್‌ ಹೇಳಿದೆ.

ಯಾವುದೇ ಕಾನೂನುಬದ್ಧ ಉತ್ತರಾಧಿಕಾರಿಯ ಅನುಪಸ್ಥಿತಿಯಲ್ಲಿ, ತನ್ನ ತಂದೆಯ ಸ್ವಯಂ ಸಂಪಾದಿತ ಆಸ್ತಿಯನ್ನು ಉತ್ತರಾಧಿಕಾರವಾಗಿ ಪಡೆಯುವ ಮಗಳ ಹಕ್ಕಿಗೆ ಸಂಬಂಧಿಸಿದ ಕಾನೂನು ಸಮಸ್ಯೆಯನ್ನು ಪೀಠವು ಪ್ರಸ್ತಾಪ ಮಾಡಿದೆ.

ನ್ಯಾಯಮೂರ್ತಿ ಮುರಾರಿ ಅವರು 51 ಪುಟಗಳ ತೀರ್ಪನ್ನು ಬರೆದಿದ್ದಾರೆ. ಉಯಿಲು ಇಲ್ಲದೆ ಮರಣ ಹೊಂದಿದ ತಂದೆಯ ಮರಣದ ನಂತರ ಅಂತಹ ಆಸ್ತಿಯು ಉತ್ತರಾಧಿಕಾರವಾಗಿ ಮಗಳಿಗೆ ಅಥವಾ ತಂದೆಯ ಸಹೋದರನಿಗೆ ಹಂಚಿಕೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ.

ವಿಧವೆ ಅಥವಾ ಮಗಳು ಸ್ವಯಂ-ಸ್ವಾಧೀನಪಡಿಸಿಕೊಂಡ ಆಸ್ತಿ ಅಥವಾ ಮೃತಪಟ್ಟ ಹಿಂದೂ ವ್ಯಕ್ತಿಯ ಪುತ್ರಿ ಆಸ್ತಿಯ ವಿಭಜನೆಯಲ್ಲಿ ಪಡೆದ ಪಾಲಿಗೆ ಉತ್ತರಾಧಿಕಾರ ಪಡೆಯುವ ಹಕ್ಕನ್ನು ಹಳೆಯ ಸಾಂಪ್ರದಾಯಿಕ ಹಿಂದೂ ಕಾನೂನಿನಲ್ಲಿ ಇದೆ. ಮಾತ್ರವಲ್ಲದೆ ವಿವಿಧ ನ್ಯಾಯಾಂಗ ತೀರ್ಪುಗಳಿಂದಲೂ ಇದನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details