ವಾರಣಾಸಿ(ಉತ್ತರ ಪ್ರದೇಶ):ಹಳೆಯಸಂಪ್ರದಾಯಗಳನ್ನು ಬದಿಗಿರಿಸಿ, ಕೊರೊನಾದಿಂದ ಮೃತಪಟ್ಟ ತಮ್ಮ ತಂದೆಯ ಅಂತ್ಯಕ್ರಿಯೆ ನಡೆಸುವ ಮೂಲಕ ಮೂವರು ಹೆಣ್ಣು ಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ಮಣಿಕರ್ಣಿಕಾ ಘಾಟ್ನಲ್ಲಿ ಹೆಣ್ಣು ಮಕ್ಕಳು ತಮ್ಮ ತಂದೆಯ ಕ್ರಿಯಾ ವಿಧಾನಗಳನ್ನು ಪುರೈಸಿದ್ದು, ಹಳೆಯ ಕಟ್ಟು ಸಂಪ್ರದಾಯಗಳಿಗೆ ಸೆಡ್ಡು ಹೊಡೆದು, ಅಚ್ಚರಿ ಮೂಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗಾಜಿಯಾಬಾದ್ ಮೂಲದ ವಕೀಲ ಗಿರಿಜೇಶ್ ಸಿಂಗ್ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಈ ವೇಳೆ ಅಂತ್ಯ ಸಂಸ್ಕಾರ ವಿಧಾನವಾದ 'ಮುಖಾಗ್ನಿ' ಅನ್ನು ಆತನ ಹೆಣ್ಣುಮಕ್ಕಳಾದ ಕಾತ್ಯಾಯಿನಿ, ದಿವ್ಯ, ತೃಪ್ತಿ ನೆರವೇರಿಸಿದ್ದಾರೆ.
ಇದನ್ನೂ ಓದಿ:ಮೋದಿ ರಾಜೀನಾಮೆಗೆ ಆಗ್ರಹಿಸಿದ್ದ ಪೋಸ್ಟ್ಗಳನ್ನು ಹೈಡ್ ಮಾಡಿದ ಫೇಸ್ಬುಕ್