ನವದೆಹಲಿ :ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ರ ಅಂತ್ಯಕ್ರಿಯೆ ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ನಡೆಯಿತು. ಅವರ ಪುತ್ರಿ ಅಂತಿಮ ವಿಧಿಗಳನ್ನು ನೆರವೇರಿಸಿದರು.
ಹರ್ಜಿಂದರ್ ಸಿಂಗ್ರ ಅಂತ್ಯಕ್ರಿಯೆ ನೆರವೇರಿಸಿದ ಪುತ್ರಿ.. ಇದಕ್ಕೂ ಮುನ್ನ, ಹರ್ಜಿಂದರ್ ಸಿಂಗ್ರ ಪತ್ನಿ ಮತ್ತು ಇಬ್ಬರು ಪುತ್ರಿಯರು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ, ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್, ವಿವೇಕ್ ರಾಮ್ ಚೌಧರಿ, ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ಇತರ ಸೇನಾ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಹರ್ಜಿಂದರ್ ಸಿಂಗ್ಗೆ ಅಂತಿಮ ನಮನ ಸಲ್ಲಿಸಿದ ಅವರ ಪತ್ನಿ-ಪುತ್ರಿಯರು ಅಂತ್ಯಕ್ರಿಯೆ ನೆರವೇರಿಸಿದ ಹರ್ಜಿಂದರ್ ಸಿಂಗ್ ಪುತ್ರಿ ಮತ್ತು ಅವರ ಕುಟುಂಬದ ಇತರ ಸದಸ್ಯರಿಗೆ ರಾಜನಾಥ್ ಸಿಂಗ್ ಸಾಂತ್ವನ ಹೇಳಿದರು.
ಹರ್ಜಿಂದರ್ ಸಿಂಗ್ಗೆ ಅಂತಿಮ ನಮನ ಸಲ್ಲಿಸಿದ ರಕ್ಷಣಾ ಸಚಿವ ಮತ್ತು ಸೇನಾ ಮುಖ್ಯಸ್ಥರು ಕೂನೂರು ಹೆಲಿಕಾಪ್ಟರ್ ಅಪಘಾತ
ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಅಂತ್ಯಕ್ರಿಯೆ ನೆರವೇರಿಸಿದ ಪುತ್ರಿಗೆ ಸಾಂತ್ವನ ಹೇಳಿದ ರಕ್ಷಣಾ ಸಚಿವ