ಕರ್ನಾಟಕ

karnataka

ETV Bharat / bharat

ತಾಯಿ ಸಾವನ್ನಪ್ಪಿದ್ದರೂ ಮೃತದೇಹ ಮನೆಯಲ್ಲೇ ಇಟ್ಟುಕೊಂಡ ಮಗಳು! - ಪಶ್ಚಿಮ ಬಂಗಾಳ ಸುದ್ದಿ

ಕಳೆದ ರಾತ್ರಿಯಿಂದ ಆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ..

west Bengal
ಮೃತದೇಹದ ಜೊತೆ ಮಗಳು ವಾಸ

By

Published : Jun 27, 2021, 3:38 PM IST

ಕೋಲ್ಕತಾ :ತಾಯಿ ಸಾವನ್ನಪ್ಪಿ 4-5 ದಿನಗಳು ಕಳೆದಿದ್ದರೂ ಸಹ ಮಗಳು ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದೆ ಮನೆಯಲ್ಲಿ ಇಟ್ಟುಕೊಂಡಿದ್ದ ಘಟನೆ ಪಶ್ಚಿಮ ಬಂಗಾಳದ ಟ್ಯಾಂಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿ ಕೃಷ್ಣದಾಸ್​ ಎಂಬುವರು ಇತ್ತೀಚೆಗೆ ಸಾವನ್ನಪ್ಪಿದ್ದರು. ಮೃತಳ ಮಗಳು ಸೋಮದಾಸ್​ ಎಂಬುವರು ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನು, ಇಂತಹದ್ದೇ ಘಟನೆಯೊಂದು ಕೋಲ್ಕತಾದ ಪಾರ್ಕ್ ಸ್ಟ್ರೀಟ್ ಪ್ರದೇಶದ ರಾಬಿನ್ಸನ್ ಬೀದಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು.

ಮೃತದೇಹದ ಜೊತೆ ಮಗಳು ವಾಸ

ಇದನ್ನು ಓದಿ: ಡ್ರ್ಯಾಗರ್ ತೋರಿಸಿ ದರೋಡೆ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಅಂದರ್!

ಇನ್ನು, ಕಳೆದ ರಾತ್ರಿಯಿಂದ ಆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು, ಹುಡುಗಿ ತಾಯಿಯ ಮೃತದೇಹದ ಪಕ್ಕದಲ್ಲಿ ಕುಳಿತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃಷ್ಣದಾಸ್​ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ABOUT THE AUTHOR

...view details