ಜೈಪುರ:ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲಿರುವ ಶವಾಗಾರದಲ್ಲಿ ತಂದೆಯ ಚಿತೆಗೆ ಮಗಳು ಹಾರಿದ ಘಟನೆ ನಡೆದಿದೆ.
ತಂದೆಯ ಅಂತ್ಯಕ್ರಿಯೆ ವೇಳೆ ಚಿತೆಗೆ ಹಾರಿದ ಮಗಳು - ರಾಜಸ್ಥಾನದಲ್ಲಿ ಕೊರೊನಾಗೆ ವ್ಯಕ್ತಿ ಬಲಿ
ಕೋವಿಡ್ನಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದ ವೇಳೆ ಮಗಳೂ ಚಿತೆಗೆ ಹಾರಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ 65 ವರ್ಷದ ವೃದ್ಧರೊಬ್ಬರ ಶವವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತರಲಾಗಿತ್ತು. ವ್ಯಕ್ತಿಯ ಅಂತ್ಯಸಂಸ್ಕಾರದ ಬಳಿಕ ಮೃತನ ಮಗಳು ಇದ್ದಕ್ಕಿದ್ದಂತೆ ತಂದೆಯ ಚಿತೆಗೆ ಹಾರಿದರು. ತಕ್ಷಣ ಅಲ್ಲಿದ್ದ ಜನ ಆಕೆಯನ್ನು ರಕ್ಷಿಸಿದರು. ಘಟನೆಯ ನಂತರ, ಕೊಟ್ವಾಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೊಟ್ವಾಲಿ ಪೊಲೀಸರು ಸ್ಥಳಕ್ಕೆ ತಲುಪಿ ಆಕೆಯನ್ನು ಜಿಲ್ಲೆಯ ವೈದ್ಯಕೀಯ ಕಾಲೇಜಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ದೇಹ ಶೇ. 70 ಕ್ಕಿಂತ ಹೆಚ್ಚು ಸುಟ್ಟಿದ್ದು, ಚಿಕಿತ್ಸೆ ಮುಂದುವರೆದಿದೆ.
ತಂದೆಯ ಮರಣದ ನಂತರ ಮಗಳು ಆಘಾತಕ್ಕೊಳಗಾಗಿದ್ದಳು. ಈ ಹಿನ್ನೆಲೆ ಈ ರೀತಿ ಬೆಂಕಿಗೆ ಹಾರಿದ್ದಾರೆ ಎನ್ನಲಾಗಿದೆ. ಇನ್ನು ಮೃತನ ಕುಟುಂಬಸ್ಥರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ ಎನ್ನಲಾಗಿದ್ದು, ಪೊಲೀಸರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿದೆ.