ಪಂಜಾಬ್:ವಯಸ್ಸಾದ ಮೇಲೆ ಮಕ್ಕಳಿಗೆ ಭಾರ ಎನ್ನಿಸುವ ತಂದೆ- ತಾಯಿಯರ ಮೇಲೆ ಹಲ್ಲೆ ನಡೆಸುವ ಘಟನೆಗಳು ಸರ್ವೇಸಾಮಾನ್ಯ ಎಂಬಂತಾಗಿದೆ. ಇದೇ ರೀತಿ ಪಂಜಾಬ್ನಲ್ಲಿ ಸೊಸೆಯೊಬ್ಬಳು ತಮ್ಮ ವಯಸ್ಸಾದ ಅತ್ತೆಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಪಂಜಾಬ್ನ ಸುರ್ವಿಂದ್ ಗ್ರಾಮದಲ್ಲಿ ವೃದ್ಧೆ ಮೇಲೆ ಸೊಸೆ ಕ್ರೂರವಾಗಿ ನಡೆದುಕೊಂಡಿದ್ದಾಳೆ. ಕುರ್ಚಿ ಮೇಲೆ ಕುಳಿತಿರುವ ವೃದ್ಧೆಯನ್ನು ಆ ಮಹಿಳೆ ಮನಸೋಇಚ್ಚೆ ಥಳಿಸಿದ್ದಾರೆ. ಕೈಗೆ ಸಿಕ್ಕ ವಸ್ತುಗಳಿಂದಲೂ ದಾಳಿ ಮಾಡಿದ್ದಾರೆ. ವೃದ್ಧೆಯ ಮೇಲೆ ಮಹಿಳೆ ಹಲ್ಲೆ ಮಾಡುತ್ತಿದ್ದರೂ ಕುಟುಂಬಸ್ಥರು ಇದನ್ನು ನೋಡುತ್ತಿದ್ದರೂ ತಡೆಯಲು ಮುಂದಾಗಿಲ್ಲ.