ಕರ್ನಾಟಕ

karnataka

ETV Bharat / bharat

ಮಗನಿಗೆ ಸುನ್ನತಿ ಮಾಡಿಸಿದ್ದಕ್ಕೆ ಸೊಸೆ, ಆಕೆ ತಾಯಿಯ ಬರ್ಬರ ಹತ್ಯೆ: ಪೊಲೀಸರ ಅತಿಥಿಯಾದ ಮೂವರು ಆರೋಪಿಗಳು..!

ಮಗನಿಗೆ ಸುನ್ನತಿ ಮಾಡಿಸಿದ್ದಕ್ಕೆ ಸೊಸೆ ಹಾಗೂ ಆಕೆ ತಾಯಿಯ ಹತ್ಯೆ- ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್ ಪ್ರಕರಣದ ಸಂಗತಿಗಳು

A case of double murder
ಡಬಲ್ ಮರ್ಡರ್ ಪ್ರಕರಣದ ಸಂಗತಿಗಳು ಬಯಲು

By

Published : Mar 17, 2023, 5:25 PM IST

ಕರ್ನೂಲ್(ಆಂಧ್ರಪ್ರದೇಶ):ಕರ್ನೂಲ್ ನಗರದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೋಡಿ ಹತ್ಯೆ ಪ್ರಕರಣದ ಆರೋಪಿಗಳಾದ ಕರ್ನೂಲ್​ನ ಚಿಂತಲಮುನಿ ನಗರದ ನರಪುರಂ ಶ್ರವಣಕುಮಾರ್, ಆತನ ತಂದೆ ನರಪುರಂ ವರಪ್ರಸಾದ್, ತಾಯಿ ಕೃಷ್ಣವೇಣಿ ಎಂಬುವರನ್ನು ಕರ್ನೂಲ್​ನ ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳ 14ರಂದು ಶ್ರವಣ್ ಕುಮಾರ್ ಅವರ ಪತ್ನಿ ರುಕ್ಮಿಣಿ ಮತ್ತು ಅತ್ತೆ ಕೋಟ ರಮಾದೇವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ, ಅವರ ಮಾವ ಕೋಟ ವೆಂಕಟೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವರಪ್ರಸಾದ್ ಅವರ ಪುತ್ರ ಶ್ರವಣ್, ಕೃಷ್ಣವೇಣಿ ಸೇರಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಮೂವರು ಆರೋಪಿಗಳನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಗುರುವಾರ ಕರ್ನೂಲ್‌ನ ಡಿಎಸ್‌ಪಿ ಕಚೇರಿಯಲ್ಲಿ ಸಿಐ ಶಂಕರಯ್ಯ ಮತ್ತು ಎಸ್‌ಐ ರಾಮಯ್ಯ ಅವರು ಮಾಹಿತಿ ಬಹಿರಂಗಪಡಿಸಿದರು. ನಂದ್ಯಾಲದ ವರಪ್ರಸಾದ್ ಮತ್ತು ಕೃಷ್ಣವೇಣಿ ಮೂವತ್ತು ವರ್ಷಗಳ ಹಿಂದೆ ಕರ್ನೂಲಿಗೆ ಬಂದು ಚಿಂತಲ ಮುನಿನಗರದಲ್ಲಿ ನೆಲೆಸಿದ್ದರು. ಇವರ ಏಕೈಕ ಪುತ್ರ ಶ್ರವಣ್ ಕುಮಾರ್ ಬಿ.ಟೆಕ್ ಓದಿದ್ದು, ಒಂದು ವರ್ಷದಿಂದ ಐಸಿಐಸಿಐ ಬ್ಯಾಂಕ್​ನ ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ವನಪರ್ತಿಯಲ್ಲಿ ನೆಲೆಸಿರುವ ಕೋಟ ವೆಂಕಟೇಶ್ ಮತ್ತು ರಮಾದೇವಿ ದಂಪತಿಯ ಏಕೈಕ ಪುತ್ರಿ ರುಕ್ಮಿಣಿ ಅವರ ಸಂಪರ್ಕಕ್ಕೆ ಬಂದು ಮದುವೆ ನಿಶ್ಚಯವಾಗಿತ್ತು.

ಕಣ್ಗಾವಲು ಅಪ್ಲಿಕೇಶನ್ ಇನ್​ಸ್ಟಾಲ್​ ಮಾಡಿದ್ದ:ಶ್ರವಣಕುಮಾರ್ ರುಖ್ಮಿಣಿಗೆ ಸೆಲ್ ಫೋನ್ ಉಡುಗೊರೆಯಾಗಿ ನೀಡಿದರು. ಅವನು ಆ ಸೆಲ್ ಫೋನ್‌ನಲ್ಲಿ ಕಣ್ಗಾವಲು ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್​ ಮಾಡಿದ್ದರು. ಅದನ್ನು ತನ್ನ ಇ-ಮೇಲ್‌ಗೆ ಲಿಂಕ್ ಮಾಡಿದ್ದರು. ರಾಘವೇಂದ್ರಗೌಡ ಎಂಬ ಯುವಕನಿಗೆ ಆಕೆ ಹಲವು ಬಾರಿ ಕರೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಅನುಮಾನ ವ್ಯಕ್ತಪಡಿಸಿದ್ದ. ಆದರೆ, ಇಬ್ಬರೂ ಮಾರ್ಚ್ 1 ರಂದು ವಿವಾಹವಾಗಿದ್ದರು.

ಎರಡು ಕುಟುಂಬಗಳ ನಡುವೆ ಜಗಳ:ಶ್ರವಣ್ ಕುಮಾರ್ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಅಷ್ಟರಲ್ಲಾಗಲೇ ತನ್ನ ಪತ್ನಿಯ ಮೊಬೈಲ್‌ ಆ್ಯಪ್‌ನಲ್ಲಿ ರೆಕಾರ್ಡ್ ಆಗಿರುವ ಫೋನ್ ಕರೆಗಳು ಬಗ್ಗೆ ಶ್ರವಣ್ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಮದುವೆಗೂ ಮುನ್ನವೇ ರುಕ್ಮಿಣಿಗೆ ಅಕ್ರಮ ಸಂಬಂಧವಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಇಬ್ಬರ ನಡುವಿನ ಜಗಳ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. ಬಳಿಕ ಶ್ರವಣ್ ಕುಮಾರ್ ಅವರನ್ನ ಅತ್ತೆಯಂದಿರು ಹೈದರಾಬಾದ್​ಗೆ ಕರೆದೊಯ್ದು ವೈದ್ಯರ ಬಳಿ ಸುನ್ನತಿ ಮಾಡಿಸಿದ್ದರು.

ತಾಯಿ - ಮಗಳ ಹತ್ಯೆ ಮಾಡಲು ಸಂಚು:ವಿಷಯ ತಿಳಿದ ವರಪ್ರಸಾದ್, ತನ್ನ ಮಗನ ಲೈಂಗಿಕ ಸಾಮರ್ಥ್ಯ ಕಡಿಮೆ ಮಾಡಲು ಸಂಚು ರೂಪಿಸಿ, ಸುನ್ನತಿ ಮಾಡಲಾಗಿದೆ ಎಂದು ನಂಬಿದ್ದಾರೆ. ಇದರಿಂದ ತನ್ನ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಗನೊಂದಿಗೆ ಚರ್ಚಿಸಿದ ವರಪ್ರಸಾದ್ ಎಲ್ಲರನ್ನೂ ಕೊಲ್ಲಲು ಸಂಚು ಮಾಡಿದ್ದ. ಮೊದಲಿಗೆ, ಮಾರ್ಚ್ 10 ರಂದು ಕೊಲ್ಲಲು ನಿರ್ಧರಿಸಲಾಯಿತು. ಆದರೆ, ಅದು ಸಾಧ್ಯವಾಗಲಿಲ್ಲ. ಬಳಿಕ ಶ್ರವಣಕುಮಾರ್ ವನಪರ್ತಿಗೆ ತೆರಳಿ ಪತ್ನಿ ಹಾಗೂ ಅತ್ತೆಯನ್ನು ಕರೆತಂದಿದ್ದರು.

ಮನಬಂದಂತೆ ಚಾಕುವಿನಿಂದ ಇರಿದು ಕೊಲೆ:ವರಪ್ರಸಾದ್ ಕಾಲೋನಿ ಬಳಿಯ ಅಂಗಡಿಯಿಂದ ಎರಡು ಚಾಕುಗಳನ್ನು ಖರೀದಿಸಿ ಮನೆಯಲ್ಲಿ ಸಿದ್ಧಪಡಿಸಿ ಇಟ್ಟಿದ್ದರು. ರುಕ್ಮಿಣಿಯನ್ನು ಮನೆಯಲ್ಲಿಟ್ಟುಕೊಂಡು ಆಕೆಯ ಪೋಷಕರನ್ನು ಮೊದಲ ಮಹಡಿಗೆ ಕಳುಹಿಸಿದ್ದಾರೆ. ಕೃಷ್ಣವೇಣಿಯನ್ನು ಮನೆಯ ಹೊರಗೆ ಕಾವಲು ಇರಿಸಿದ್ದಾರೆ. ನಂತರ ವರಪ್ರಸಾದ್ ಮತ್ತು ಶ್ರವಣ್ ಮೊದಲು ರುಕ್ಮಿಣಿಯ ಬಾಯಿ ಮುಚ್ಚಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೂಡಲೇ ಮೊದಲ ಮಹಡಿ ತಲುಪಿದ ವರಪ್ರಸಾದ್ ರಮಾದೇವಿಗೆ ಮನಬಂದಂತೆ ಇರಿದಿದ್ದಾನೆ. ತಡೆಯಲು ಯತ್ನಿಸಿದ ವೆಂಕಟೇಶ್​ಗೂ ಚಾಕುವಿನಿಂದ ಇರಿಯಲಾಗಿದ್ದು, ಅವರೂ ಕೂಡಅ ತೀವ್ರ ಗಾಯಗೊಂಡು ಮನೆಯಿಂದ ಹೊರಬಂದು ಪರಾರಿಯಾಗಿದ್ದಾರೆ.

ಕೊಲೆ ಪ್ರಕರಣದ ಆರೋಪಿಗಳ ಬಂಧನ:ರಮಾದೇವಿ ತಪ್ಪಿಸಿಕೊಳ್ಳಲಾರದೇ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯರ ಆಗಮನದಿಂದ ವೆಂಕಟೇಶ್ 108ರಲ್ಲಿ ಕರ್ನೂಲು ಸರ್ಕಾರಿ ಆಸ್ಪತ್ರೆಗೆ ತಲುಪಿದ್ದಾರೆ. ನಗರದ ಹೊರವಲಯದ ಗುತ್ತಿ ಪೆಟ್ರೋಲ್ ಬಂಕ್​ನಲ್ಲಿ ಗುರುವಾರ ಬೆಳಗ್ಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಸಿಐ( ಪೊಲೀಸ್​ ಇನ್ಸ್​​ಪೆಕ್ಟರ್​) ತಿಳಿಸಿದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲುಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ

ಇದನ್ನೂ ಓದಿ:ತಂದೆಯ ಎದುರೇ ಬಾಲಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು..!

ABOUT THE AUTHOR

...view details