ಕರ್ನಾಟಕ

karnataka

ETV Bharat / bharat

ಮದು ಮಗನಂತೆ ಮೆರವಣಿಗೆಯಲ್ಲಿ ಸಾಗಿದ ವಧು: ತಂದೆಯಿಂದ ಹೊಸ ಸಂಪ್ರದಾಯಕ್ಕೆ ನಾಂದಿ - ಮದುಮಗಳ ಮರೆವಣಿಗೆ

ಉತ್ತರ ಪ್ರದೇಶದ ಮೊರಾದಾಬಾದ್​​ನ ನಿವಾಸಿಯೊಬ್ಬರು ತಮ್ಮ ಮಗಳಿಗೆ ಮದುಮಗನಂತೆ ಮದುವೆ ಮೆರವಣಿಗೆ ಮಾಡಿಸುವ ಮೂಲಕ ಹೊಸ ಪದ್ಧತಿಕ್ಕೆ ನಾಂದಿ ಹಾಡಿದ್ದಾರೆ.

daughter-became-groom-father-said-no-discrimination
ಮದುಮಗನಂತೆ ಮೆರವಣಿಗೆಯಲ್ಲಿ ಸಾಗಿದ ವಧು: ತಂದೆಯಿಂದ ಹೊಸ ಸಂಪ್ರದಾಯಕ್ಕೆ ನಾಂದಿ

By

Published : Dec 7, 2022, 5:56 PM IST

ಮೊರಾದಾಬಾದ್ (ಉತ್ತರ ಪ್ರದೇಶ): ಮದುಮಗ ಮದುವೆ ಮೆರವಣಿಗೆ ಹೊರಡುವುದು ಸಾಮಾನ್ಯ. ಉತ್ತರ ಪ್ರದೇಶದ ಮೊರಾದಾಬಾದ್​​ನಲ್ಲಿ ಮದುಮಗಳ ಮರೆವಣಿಗೆ ಮಾಡುವ ಮೂಲಕ ತಂದೆಯೊಬ್ಬರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಹೌದು, ಅಖಿಲ ಭಾರತ ವಾರ್ಷಿಕ ಬ್ರಾಹ್ಮಣ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಶರ್ಮಾ ತಮ್ಮ ಮಗಳ ಶ್ವೇತಾ ಭಾರದ್ವಾಜ್ ಮದುವೆ ಮೆರೆವಣಿಗೆ ಮಾಡಿಸಿ ಗಮನ ಸೆಳೆದಿದ್ದಾರೆ. ಮಹಿಳೆಯರನ್ನೂ ಸಮಾನವಾಗಿ ನೋಡಬೇಕೆಂಬ ಉದ್ದೇಶದಿಂದ ಮದುಮಗನಂತೆ ಮಗಳ ಅದ್ದೂರಿ ಮೆರವಣಿಗೆ ನಡೆಸಿದ್ದಾರೆ.

ಇಂದು ಶ್ವೇತಾ ಭಾರದ್ವಾಜ್ ಮದುವೆ ನಿಶ್ಚಯವಾಗಿತ್ತು. ಮದುವೆಯ ಮುನ್ನ ದಿನವಾದ ಮಂಗಳವಾರ ರಾತ್ರಿ ಸಂಪ್ರದಾಯ ಪ್ರಕಾರ ಸಾರೋಟಿನಲ್ಲಿ ಶ್ವೇತಾರನ್ನು ಕೂಡಿಸಿ ಮಂಗಳ ವಾದ್ಯಗಳ ಸಮೇತ ಮರೆವಣಿಗೆ ನಡೆಸಲಾಗಿದೆ. ಮದುಮಗನ ವೇಷ ಧರಿಸಿ ಸಾರೋಟಿನಲ್ಲಿ ಸಾಗುತ್ತಿದ್ದ ಶ್ವೇತಾರನ್ನು ಕಂಡು ಎಲ್ಲರೂ ಮಂತ್ರ ಮುಗ್ಧರಾಗಿದ್ದರು.

ಮದುವೆ ವಿಷಯದಲ್ಲೂ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಮನೋಭಾವ ಇದೆ. ಇಂತಹ ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಸಿಗಬೇಕು ಎಂಬುದು ನನ್ನ ನಂಬಿಕೆ. ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆ ಸಮಾನ ಅವಕಾಶಗಳು ಇರಬೇಕೆಂಬ ಉದ್ದೇಶದಿಂದ ವಿಶಿಷ್ಟ ಮರೆವಣಿಗೆ ನಡೆಸಲಾಗಿದೆ. ಇದರಿಂದ ಇತರರು ಕೂಡ ಸ್ಫೂರ್ತಿ ಪಡೆದು ಅವರ ಚಿಂತನೆಯಲ್ಲಿ ಬದಲಾವಣೆಯಾಗಬೇಕೆಂದು ರಾಜೇಶ್ ಶರ್ಮಾ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮದುವೆ ಮಂಟಪಗಳೆದುರು ಪೊಲೀಸ್ ಚೆಕ್‌ಪೋಸ್ಟ್; ಕುಡಿದು ವಾಹನ ಹತ್ತಿದ್ರೆ ಇಲ್ಲಿ ದಂಡ!

ABOUT THE AUTHOR

...view details