ರಾಯಪುರ(ಛತ್ತೀಸ್ಗಢ):ನಿನ್ನೆ 82 ವರ್ಷದ ವೃದ್ಧರೊಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಅವರ ಮಗಳು ವಿಡಿಯೋ ಕರೆ ಮೂಲಕ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.
ಮಗಳು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ಅವರ ಸಂಬಂಧಿಕರು ಸಹ ದೂರದ ಊರುಗಳಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಕರ ಅನುಪಸ್ಥಿತಿಯಲ್ಲಿ ಮಗಳು ಅಮೆರಿಕಾದಿಂದ ವಿಡಿಯೋ ಕರೆ ಮೂಲಕ ತಂದೆಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಳು.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು, ಕುಟುಂಬದವರ ಒಪ್ಪಿಗೆ ಪಡೆದು ಕೋವಿಡ್ ಮಾರ್ಗಸೂಚಿ ಅನ್ವಯ ನಾವೇ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಮೃತರ ಕುಟುಂಬಸ್ಥರು ಬಹಳ ದೂರ ಇರುವ ಕಾರಣ ಅವರು ಬರುವವರೆಗೂ ಕಾಯುವುದು ಸಾಧ್ಯವಿಲ್ಲ, ಹೀಗಾಗಿ ಅವರ ಮಗಳಿಗೆ ವಿಡಿಯೋ ಕಾಲ್ ಮೂಲಕ ಮೃತರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯ್ತು ಎಂದು ತಿಳಿಸಿದರು.