ಕರ್ನಾಟಕ

karnataka

ETV Bharat / bharat

ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು "ದರ್ವಾಜ್​​ ಪೆ ದಸ್ತಕ್"​ ಅಭಿಯಾನ - ರಾಜಸ್ಥಾನದ ಕೋಟಾವನ್ನು ದೇಶದ ಕೋಚಿಂಗ್​ ಹಬ್​

ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಾಜಸ್ಥಾನ ಪೊಲೀಸರು ದರ್ವಾಜ್​ ಪೆ ದಸ್ತಕ್​ ಅಭಿಯಾನ ಆರಂಭಿಸಿದ್ದಾರೆ.

darwaaze pe dastak
ದರ್ವಾಜ್​​ ಪೆ ದಸ್ತಕ್

By ETV Bharat Karnataka Team

Published : Sep 3, 2023, 10:33 PM IST

Updated : Sep 3, 2023, 10:57 PM IST

ಕೋಟಾ (ರಾಜಸ್ಥಾನ) :ರಾಜಸ್ಥಾನದ ಕೋಟಾವನ್ನು ದೇಶದ ಕೋಚಿಂಗ್​ ಹಬ್​ ಎಂದು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ನೀಟ್​​ ಮತ್ತು ಜೆಇಇ ಕೋಚಿಂಗ್​ ಪಡೆಯಲು ಆಗಮಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆಯನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ನಿರ್ಮೂಲನೆ ಮಾಡಲು ರಾಜಸ್ಥಾನ ಪೊಲೀಸರು ಹೊಸ ಅಭಿಯಾನ ಆರಂಭಿಸಿದ್ದಾರೆ.

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು "ದರ್ವಾಜ್​ ಪೆ ದಸ್ತಕ್"​ ಅಭಿಯಾನ": ವಿದ್ಯಾರ್ಥಿಗಳಲ್ಲಿನ ಮಾನಸಿಕ ಖಿನ್ನತೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ನಿಟ್ಟಿನಲ್ಲಿ ದರ್ವಾಜ್​ ಪೆ ದಸ್ತಕ್ (ಬಾಗಿಲು ತಟ್ಟಿ) ಅಭಿಯಾನವನ್ನು ಪೊಲೀಸರು ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಪೊಲೀಸರು, ಹಾಸ್ಟೆಲ್​ ವಾರ್ಡನ್​ಗಳು, ಮೆಸ್​ನಲ್ಲಿ ಕೆಲಸ ಮಾಡುವವರನ್ನು ಸೇರಿಸಿಕೊಳ್ಳಲಾಗಿದೆ.

ಹಾಸ್ಟೆಲ್​ ವಾರ್ಡನ್​ಗಳು, ಮೆಸ್​ನಲ್ಲಿ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸುವವರು ವಿದ್ಯಾರ್ಥಿಗಳು ಸರಿಯಾಗಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸ್ವೀಕರಿಸುತ್ತಾರೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳು ಸರಿಯಾಗಿ ಆಹಾರವನ್ನು ಸೇವಿಸದಿದ್ದಲ್ಲಿ ಇದಕ್ಕೆ ಕಾರಣ ಕಂಡು ಹಿಡಿಯುವುದು, ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು. ಅಲ್ಲದೆ ಈ ಸಂಬಂಧ ಒಂದು ಹೆಲ್ಪ್ ಲೈನ್​ ಕೂಡ ಪ್ರಾರಂಭಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳಲ್ಲಿ ಮಾನಸಿಕ ಖಿನ್ನತೆ ಕಂಡುಬಂದಲ್ಲಿ ಕೂಡಲೇ ಈ ಸಂಖ್ಯೆಗೆ ಸಂಪರ್ಕಿಸುವುದು. ಇದರಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಬಹುದು.

ಈ ಬಗ್ಗೆ ಮಾಹಿತಿ ನೀಡಿದ ಕೋಟಾ ಎಎಸ್ಪಿ ಚಂದ್ರಶೀಲ್ ಠಾಕೂರ್ ಅವರು, ಈ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ಮೆಸ್​ನವರು ಮತ್ತು ವಾರ್ಡನ್​ಗಳು ಮೇಲ್ವಿಚಾರಣೆ ನಡೆಸುತ್ತಾರೆ. ಇವರು ವಿದ್ಯಾರ್ಥಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಾರೆ. ಅಲ್ಲದೆ ವಾರ್ಡನ್​ಗಳು ವಿದ್ಯಾರ್ಥಿಗಳ ಜೊತೆ ಉತ್ತಮ ಸಂಬಂಧ ಹೊಂದಬೇಕು. ಅಲ್ಲದೆ ವಿದ್ಯಾರ್ಥಿಗಳು ಆಹಾರವನ್ನು ಸೇವಿಸದಿದ್ದರೆ,ಈ ಬಗ್ಗೆ ಅವರಲ್ಲಿ ಕೇಳಬೇಕು. ಮೆಸ್​ನವರು ವಿದ್ಯಾರ್ಥಿಗಳ ಕೊಠಡಿಗಳ ಬಾಗಿಲು ತಟ್ಟಬೇಕು. ಪ್ರತಿ ದಿನ ವಾರ್ಡನ್​ಗಳು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಬೇಕು. ವಿದ್ಯಾರ್ಥಿಗಳ ಸ್ಥಿತಿಗತಿಯನ್ನು ಅರಿಯಬೇಕು ಎಂದು ಹೇಳಿದರು.

ಈ ರೀತಿ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸುವುದರಿಂದ ಅವರ ಮಾನಸಿಕ ಖಿನ್ನತೆಯನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಬಹುದು. ಪ್ರತಿ ವರ್ಷ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕೋಚಿಂಗ್​ ಪಡೆಯಲು ಕೋಟಾಗೆ ಆಗಮಿಸುತ್ತಿದ್ದಾರೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಸುಮಾರು 22 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಆಗಸ್ಟ್​ 27ರಂದು ಕೆಲವೇ ಗಂಟೆಗಳ ಅವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದರು. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ರಾಜಸ್ಥಾನ ಪೊಲೀಸರು ದರ್ವಾಜ್​ ಪೆ ದಸ್ತಕ್​ ಅಭಿಯಾನವನ್ನು ಆರಂಭಿಸಿದ್ದಾರೆ.(PTI)

ಇದನ್ನೂ ಓದಿ :Student suicide: ಕೋಟಾದಲ್ಲಿ ಮತ್ತೊಬ್ಬ ಐಐಟಿ ಆಕಾಂಕ್ಷಿ ಆತ್ಮಹತ್ಯೆ: 8 ತಿಂಗಳಲ್ಲಿ 22ನೇ ಸಾವು ಪ್ರಕರಣ!

Last Updated : Sep 3, 2023, 10:57 PM IST

ABOUT THE AUTHOR

...view details