ಕರ್ನಾಟಕ

karnataka

ETV Bharat / bharat

ಹೆಚ್ಚು ಪೌಷ್ಟಿಕಾಂಶ ಮಾತ್ರೆ ತಿನ್ನುವ ಆಟ; ವಿದ್ಯಾರ್ಥಿನಿ ಸಾವು, ಐವರು ಗಂಭೀರ - ಪುರಸಭೆ ಆಡಳಿತದ ಒಡೆತನದ ಉರ್ದು ಮಾಧ್ಯಮ ಶಾಲೆ

ಉರ್ದು ಶಾಲೆಯೊಂದರಲ್ಲಿ ಆಟವಾಡುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರಲ್ಲಿ ಒಬ್ಬರು ಹೆಚ್ಚು ಪೌಷ್ಟಿಕಾಂಶದ ಮಾತ್ರೆ ಸೇವಿಸಿ ಮೃತಪಟ್ಟಿದ್ದಾರೆ.

Dare game of eating More iron tablets  Class VIII student died  girl student died  Dare game of eating More iron tablets in TN  ಪೌಷ್ಟಿಕಾಂಶದ ಮಾತ್ರೆ ತಿನ್ನುವ ಆಟ  ಐವರ ಸ್ಥಿತಿ ಚಿಂತಾಜನಕ  ಶಾಲೆವೊಂದರಲ್ಲಿ ಆಟವಾಡುತ್ತಿದ್ದ ನಾಲ್ವರು ವಿದ್ಯಾರ್ಥಿನಿ  ಪೌಷ್ಟಿಕಾಂಶದ ಮಾತ್ರೆಗಳನ್ನು ಸೇವಿಸಿ ದಾರುಣವಾಗಿ ಮೃತ  ಜಿಲ್ಲೆಯಲ್ಲಿ ದುರಂತ ಘಟನೆ  ಪುರಸಭೆ ಆಡಳಿತದ ಒಡೆತನದ ಉರ್ದು ಮಾಧ್ಯಮ ಶಾಲೆ  ನಾಲ್ವರ ಪೈಕಿ ವಿದ್ಯಾರ್ಥಿನಿಯೊಬ್ಬಳ ಸ್ಥಿತಿ ಗಂಭೀರ
ಅತೀ ಹೆಚ್ಚು ಪೌಷ್ಟಿಕಾಂಶದ ಮಾತ್ರೆ ತಿನ್ನುವ ಆಟ

By

Published : Mar 10, 2023, 12:26 PM IST

ನೀಲಗಿರಿ (ತಮಿಳುನಾಡು):ಶಾಲಾ ಮಕ್ಕಳು ಪೌಷ್ಟಿಕಾಂಶದ ಮಾತ್ರೆಗಳನ್ನು ಸೇವಿಸುವ ಆಟವಾಡಿದ್ದು, ವಿದ್ಯಾರ್ಥಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಮಾರ್ಚ್​ 6ರಂದು ನೀಲಗಿರಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿವರ: ಊಟಿ ಕಾಂತಲ್ ಪ್ರದೇಶದಲ್ಲಿ ಪುರಸಭೆ ಆಡಳಿತ ಒಡೆತನದ ಉರ್ದು ಮಾಧ್ಯಮ ಶಾಲೆ ಕಾರ್ಯನಿರ್ವಹಿಸುತ್ತಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಔಷಧ ಮತ್ತು ಸಾರ್ವಜನಿಕ ಕಲ್ಯಾಣ ಇಲಾಖೆಯಿಂದ ಪೌಷ್ಟಿಕಾಂಶದ ಮಾತ್ರೆಗಳನ್ನು ನೀಡಲಾಗಿದೆ. ಈ ಮಾತ್ರೆಗಳನ್ನು ವೈದ್ಯಕೀಯ ಮೇಲ್ವಿಚಾರಕರು ಅಥವಾ ಶಾಲೆಯಲ್ಲಿ ಶಿಕ್ಷಕರಿಂದ ದಿನಕ್ಕೊಮ್ಮೆ ವಿದ್ಯಾರ್ಥಿಗಳಿಗೆ ನೀಡಬೇಕು. ಮಾರ್ಚ್​​ 6ರಂದು ಶಾಲಾ ವಿದ್ಯಾರ್ಥಿಗಳ ಕೈಗೆ ಸಾಕಷ್ಟು ಪ್ರಮಾಣದಲ್ಲಿ ಮಾತ್ರೆಗಳು ಸಿಕ್ಕಿವೆ. ಆಗ ನಾಲ್ವರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ಅತೀ ಹೆಚ್ಚು ಮಾತ್ರೆಗಳನ್ನು ತಿನ್ನುವ ಡೇರ್​ ಗೇಮ್​ ಆಟವಾಡಿದ್ದಾರೆ.

ಆಟದಲ್ಲಿ ಮಿತಿಮೀರಿದ ಮಾತ್ರೆ ಸೇವನೆಯಿಂದ 6ನೇ ತರಗತಿ ವಿದ್ಯಾರ್ಥಿ, 7ನೇ ತರಗತಿ ವಿದ್ಯಾರ್ಥಿ ಹಾಗೂ ನಾಲ್ವರು ಎಂಟನೇ ತರಗತಿ ವಿದ್ಯಾರ್ಥಿಗಳು ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕೂಡಲೇ ವಿದ್ಯಾರ್ಥಿಗಳನ್ನು ಊಟಿ ಸರಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಈ ಪೈಕಿ 4 ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ನಾಲ್ವರ ಪೈಕಿ ವಿದ್ಯಾರ್ಥಿನಿಯೊಬ್ಬಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಚೆನ್ನೈಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆಗೆ ತೆರಳುವ ಮಾರ್ಗಮಧ್ಯೆ ಸೇಲಂ ಬಳಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಊಟಿ ಪಶ್ಚಿಮ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೀನಾ ಪ್ರಿಯಾ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಗ್ಯ ಇಲಾಖೆಯ ಉಪನಿರ್ದೇಶಕ ಬಾಲುಸಾಮಿ ಮಾತನಾಡಿ, ಮಕ್ಕಳಿಗೆ ವಾರಕ್ಕೊಮ್ಮೆ ಊಟದ ನಂತರ ಪೌಷ್ಟಿಕಾಂಶದ ಮಾತ್ರೆಗಳನ್ನು ನೀಡಬೇಕು. ಅದೂ ಕೂಡ ನೇಮಕಗೊಂಡ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳಿಗೆ ನೀಡಲಾಗುವುದು. ಆದರೆ ಇಷ್ಟೊಂದು ಮಾತ್ರೆಗಳು ಹೇಗೆ ಅವರ ಕೈಗೆ ಸಿಕ್ಕವು ಎಂಬುದು ತಿಳಿದಿಲ್ಲ. ಈ ಮಾತ್ರೆಗಳು ಮಕ್ಕಳ ಕೈಸೇರಿದ್ದು, ಶಿಕ್ಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಬಾಲುಸಾಮಿ ಹೇಳಿದ್ದಾರೆ.

ನಗರಸಭೆ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಮೊಹಮ್ಮದ್ ಅಮೀನ್ ಹಾಗೂ ಮಾತ್ರೆ ವಿತರಣೆ ನಿಗಾ ಅಧಿಕಾರಿ ಹಾಗೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಲೈವಾಣಿ ಇಬ್ಬರನ್ನೂ ವಜಾಗೊಳಿಸಿ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಜಯಕುಮಾರ್ ಆದೇಶ ಹೊರಡಿಸಿದ್ದಾರೆ. ಘಟನೆ ನಡೆದ ಮಾರ್ಚ್​ 6ರಂದು ಶಿಕ್ಷಕಿ ಕಲೈವಾಣಿ ಶಾಲೆಗೆ ಬಂದಿರಲಿಲ್ಲ ಎನ್ನಲಾಗಿದೆ. ಹಾಗಾದರೆ, ವಿದ್ಯಾರ್ಥಿಗಳು ಬ್ಯೂರೋದಲ್ಲಿದ್ದ ಮಾತ್ರೆಗಳನ್ನು ಹೇಗೆ ತೆಗೆದುಕೊಂಡರು ಎಂಬ ದೃಷ್ಟಿಕೋನದಿಂದ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಪದವಿ ಸ್ವೀಕರಿಸಿದ ನಂತರ ವಿದ್ಯಾರ್ಥಿನಿಯ ಜೋಶ್‌ ನೋಡಿ!: ಸಂಚಲನ ಸೃಷ್ಟಿಸಿದ ವಿಡಿಯೋ

ABOUT THE AUTHOR

...view details