ಫರಿದಾಬಾದ್(ಹರಿಯಾಣ):ಆರೋಗ್ಯವಾಗಿರಬೇಕೆಂದು ಎಲ್ಲರೂ ವ್ಯಾಯಾಮ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವ್ಯಾಯಾಮ ಮಾಡೋದನ್ನು ನೋಡಿದ್ರೆ, ಆತ ಸಾಯೋದಕ್ಕೇ ವ್ಯಾಯಾಮ ಮಾಡ್ತಿದಾನೇನೋ ಅಂತ ಅನ್ನಿಸದೇ ಇರೋದಿಲ್ಲ.
ಹರಿಯಾಣದ ಫರೀದಾಬಾದ್ನಲ್ಲಿ ವ್ಯಕ್ತಿಯೋರ್ವ ಒಂದು ಕಟ್ಟಡದ 12ನೇ ಮಹಡಿಯ ಬಾಲ್ಕನಿಯ ಹೊರಗೆ ರೇಲಿಂಗ್ ಹಿಡಿದು ವ್ಯಾಯಾಮ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಡೇರ್ ಡೆವಿಲ್ ವರ್ಕೌಟ್ ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಮಹಿಳೆಯೋರ್ವಳು ಕೆಳಗೆ ಬಿದ್ದಿದ್ದ ಬಟ್ಟೆಗಳನ್ನು ತರಲು 10 ಮಹಡಿಯಿಂದ ತನ್ನ ಮಗನನ್ನು ಸೀರೆಯ ಮೂಲಕ ಕೆಳಗಿಳಿಸಿದ ಘಟನೆ ಫರೀದಾಬಾದ್ನ ಸೆಕ್ಟರ್ 80ರಲ್ಲಿ ನಡೆದಿದ್ದು, ಈ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ 'ಅಜಾಗರೂಕತೆ, ಬೇಜವಾಬ್ದಾರಿತನ, ಸಂವೇದನಾರಹಿತತೆಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಪಾರ್ಟ್ಮೆಂಟ್ ಕೂಡಾ ಆಕೆಗೆ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ:ಚಂಬಲ್ ನದಿಗೆ ಉರುಳಿದ ಮದುವೆಗೆ ತೆರಳುತ್ತಿದ್ದ ಕಾರು: ಮದುಮಗ ಸೇರಿ 9 ಮಂದಿ ಸಾವು