ದಾಂತೆವಾಡ (ಛತ್ತೀಸ್ಗಢ): ಜಿಲ್ಲೆಯಲ್ಲಿ ಕೋವಿಡ್ ಸೋಂಕು ಮತ್ತು ಫುಡ್ ಪಾಯಿಸನಿಂಗ್ನಿಂದ ಬಳಲುತ್ತಿರುವ ಮಾವೋವಾದಿ ಮುಖಂಡರು ಮತ್ತು ಕೆಡೆಟ್‌ಗಳು ಶರಣಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾವೋವಾದಿ ನಾಯಕರು ಫುಡ್ ಪಾಯಿಸನಿಂಗ್ ಮತ್ತು ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಬಗ್ಗೆ ನಮಗೆ ಮಾಹಿತಿ ದೊರತಿದೆ. ದಂಡಾರಾಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್ಝೆಡ್ಸಿ) ಸದಸ್ಯೆ ಸುಜಾತ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆಯಿಂದ ನಡೆಯಲಾಗದ ಸ್ಥಿತಿಯಲ್ಲಿದ್ದಾಳೆ ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದರು. ಮಾವೋವಾದಿ ನಾಯಕಿ ಸುಜಾತ ಕುರಿತು ಸುಳಿವು ನೀಡಿದರೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ ಈಗಾಗಲೇ ಭದ್ರತಾ ಪಡೆಗಳು ಘೋಷಣೆ ಮಾಡಿವೆ.