ದಾಮೋಹ್(ಮಧ್ಯಪ್ರದೇಶ):ಆಟವಾಡುತ್ತಿದ್ದ ಬಾಲಕ ಅಚಾನಕ್ಕಾಗಿ ಮನೆಯಂಗಳದಲ್ಲಿದ್ದ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ದಾಮೋಹ್ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ನೇಹಿತನ ಸಮಯಪ್ರಜ್ಞೆಯಿಂದ ಬಾಲಕನ ಜೀವ ಉಳಿದಿದೆ.
ಏನಾಯ್ತು?:ಇಬ್ಬರು ಬಾಲಕರು ಮನೆಯಂಗಳದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅರ್ನವ್ ಎಂಬಾತ ಬಾವಿಯ ಕಟ್ಟೆಯ ಮೇಲೆ ಹೋಗಿದ್ದಾನೆ. ಅಚಾನಕ್ಕಾಗಿ ಬಾಲಕ ಅದರ ಮುಚ್ಚಳವನ್ನು ತುಳಿದಾಗ ಅದು ತೆರೆದುಕೊಂಡಿದೆ. ಇದರಿಂದ ಆತ ಬಾವಿಯೊಳಗೆ ಬಿದ್ದಿದ್ದಾನೆ. ಇದನ್ನು ಕಂಡ ಸ್ನೇಹಿತ ಸನ್ಯಾಮ್ ತಕ್ಷಣವೇ ಅಲ್ಲಿಗೆ ಬಂದು ಬಾವಿಯೊಳಗೆ ಇಣುಕಿ ನೋಡಿದ್ದಾನೆ.