ಚುರು(ರಾಜಸ್ಥಾನ):ತನ್ನೊಂದಿಗೆ ಬರುವಂತೆ ದಲಿತ ಯುವಕನನ್ನ ಕರೆದ ವೇಳೆ ಆತ ಬಾರದ ಕಾರಣಕ್ಕಾಗಿ ಅಪಹರಣ ಮಾಡಿ, ಬಲವಂತವಾಗಿ ಮದ್ಯ, ಮೂತ್ರ ಕುಡಿಸಿರುವ ಅಮಾನವೀಯ ಘಟನೆ ರಾಜಸ್ಥಾನದ ಚುರುದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ಜನವರಿ 26ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದ ರತನ್ಗಡ್ಡ ರುಖಾಸರ್ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ದುಷ್ಕರ್ಮಿಗಳ ಗುಂಪು ದಲಿತ ಯುವಕನನ್ನು ಅಪಹರಿಸಿ, ಆತನ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಇದಕ್ಕೂ ಮುಂಚಿತವಾಗಿ ತನಗೆ ಬಲವಂತವಾಗಿ ಮದ್ಯ ಹಾಗೂ ಮೂತ್ರ ಕುಡಿಸಿದ್ದಾರೆಂದು ಸಂತ್ರಸ್ತ ಆರೋಪಿಸಿದ್ದಾನೆ.
ಏನಿದು ಪ್ರಕರಣ?ಕಾರಿನಲ್ಲಿ ಬಂದಿರುವ ವ್ಯಕ್ತಿಯೋರ್ವ ತನ್ನೊಂದಿಗೆ ಬರುವಂತೆ ದಲಿತ ಯುವಕ ರಾಕೇಶ್ನನ್ನು ಕರೆದಿದ್ದಾನೆ. ಈ ವೇಳೆ ಹೋಗಲು ನಿರಾಕರಣೆ ಮಾಡಿದ್ದಾನೆ. ಇದರ ಬೆನ್ನಲ್ಲೇ ಕೆಲವರನ್ನ ಕರೆದುಕೊಂಡು ಅಲ್ಲಿಗೆ ಬಂದು ಅಪಹರಿಸಿಕೊಂಡು ಹೋಗಿದ್ದಾರೆ.