ತಮಿಳುನಾಡು:ದಲಿತ ವ್ಯಕ್ತಿಯೋರ್ವನ ಮೇಲೆ ಪೊಲೀಸರು ಹಲ್ಲೆ ನಡೆಸಿ ಹಿಂಸಿಸಿರುವ ಘಟನೆ ಸೋಮವಾರ ಮಧುರೈನಲ್ಲಿ ನಡೆದಿದೆ.
ಮಧುರೈ: ದಲಿತ ವ್ಯಕ್ತಿ ಮೇಲೆ ಪೊಲೀಸರಿಂದ ಹಲ್ಲೆ, ದೂರು ದಾಖಲು - ತಮಿಳುನಾಡು
ದೇವಾಲಯದ ಉತ್ಸವವೊಂದರಲ್ಲಿ ಪ್ರದರ್ಶನ ನೀಡಿ ಮನೆಗೆ ತೆರಳುತ್ತಿದ್ದ ದಲಿತ ವ್ಯಕ್ತಿಯೋರ್ವನಿಗೆ ಪೊಲೀಸರು ಥಳಿಸಿರುವ ಘಟನೆ ಮಧುರೈನಲ್ಲಿ ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ತಮಿಳ್ಪತಿ ಎಂಬುವರು ದೂರು ದಾಖಲಿಸಿದ್ದಾರೆ. ಸಂಗೀತ ಕಲಾವಿದನಾದ ನನ್ನ ತಮ್ಮ ತಿರುಪತಿ, ದೇವಾಲಯದ ಉತ್ಸವವೊಂದರಲ್ಲಿ ಪ್ರದರ್ಶನ ನೀಡಿ ಮನೆಗೆ ತೆರಳುತ್ತಿದ್ದಾಗ ಆತನನ್ನು ಅನುಮಾನಾಸ್ಪದವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರ ಹಲ್ಲೆಯಿಂದಾಗಿ ತಿರುಪತಿ ತೀವ್ರವಾಗಿ ಗಾಯಗೊಂಡಿದ್ದು, ಹಲ್ಲು ಮತ್ತು ಮೂಗಿಗೆ ಗಾಯವಾಗಿದೆ. ತನ್ನ ತಮ್ಮನ ಮೇಲೆ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.