ದಿಂಡಿಗಲ್ (ತಮಿಳುನಾಡು):2012ರಲ್ಲಿ ನಡೆದ ದಲಿತ ನಾಯಕ ಪಶುಪತಿ ಪಾಂಡಿಯನ್ ಹತ್ಯೆಗೆ ಪ್ರತೀಕಾರವಾಗಿ 59 ವರ್ಷದ ಮಹಿಳೆಯ ಶಿರಚ್ಛೇದನ ಮಾಡಿ, ಆಕೆಯ ತಲೆಯನ್ನು ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಆತನ ನಿವಾಸದ ಮುಂದೆ ಇರಿಸಲಾಗಿದೆ.
ದಿಂಡಿಗಲ್‌ನ ಚೆಟ್ಟಿನಾಯಕನಪಟ್ಟಿಯಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ನಿರ್ಮಲಾ ದೇವಿ ಎಂದು ಗುರುತಿಸಲಾಗಿದೆ. 2012ರ ಜನವರಿಯಲ್ಲಿ ಪಾಂಡಿಯನ್ ನಿವಾಸಕ್ಕೆ ನುಗ್ಗಿದ ಗುಂಪೊಂದು ಆತನನ್ನು ಹತ್ಯೆ ಮಾಡಿತ್ತು. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದ್ದು, ತನಿಖೆ ಚಾಲ್ತಿಯಲ್ಲಿರುವಾಗಲೇ ಈ ಹತ್ಯೆಯ ಸೇಡು ತೀರಿಸಿಕೊಳ್ಳಲು ಐವರನ್ನು ಕೊಲ್ಲಲಾಗಿದೆ. ಇದೀಗ ಹಂತಕರಿಗೆ ಉಳಿದುಕೊಳ್ಳಲು ಸಹಾಯ ಮಾಡಿದ್ದಾಳೆ ಎಂಬ ಆರೋಪದ ಮೇಲೆ ನಿರ್ಮಲಾ ದೇವಿಯನ್ನೂ ಹತ್ಯೆ ಮಾಡಲಾಗಿದೆ.