ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಂಚಿಕೊಂಡಿದ್ದ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ದೆಹಲಿಯ ದಲಿತ ಬಾಲಕಿಯ ಕುಟುಂಬಸ್ಥರ ಜೊತೆಗಿರುವ ಫೋಟೋ ಇದೀಗ ಟ್ವಿಟರ್ನಲ್ಲಿ ಕಾಣಿಸುತ್ತಿಲ್ಲ.
ಕಳೆದ ಬುಧವಾರ ಮೃತ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ ಸಾಂತ್ವನ ಹೇಳಿದ್ದರು. "ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು. ನಾನು ನ್ಯಾಯದ ಹಾದಿಯಲ್ಲಿ ಅವರೊಂದಿಗೆ ಇದ್ದೇನೆ" ಎಂದು ಕೊಲೆಯಾದ 9 ವರ್ಷದ ಬಾಲಕಿ ಮತ್ತು ಆಕೆಯ ಕುಟುಂಬಸ್ಥರ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Minor Girl Rape Case: ಸಂತ್ರಸ್ತೆ ಕುಟುಂಬದ ಫೋಟೋ ಪೋಸ್ಟ್ ಆರೋಪದಡಿ ರಾಹುಲ್ ವಿರುದ್ಧ ದೂರು
ಹೀಗೆ ಸಂತ್ರಸ್ತೆಯ ಫೋಟೋ ಹಂಚಿಕೊಳ್ಳುವುದು ಬಾಲ ನ್ಯಾಯ ಮತ್ತು ಪೋಕ್ಸೊ ಕಾಯ್ದೆಗಳನ್ನು ಉಲ್ಲಂಘಿಸುತ್ತದೆ. ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ದೆಹಲಿ ಪೊಲೀಸ್ ಮತ್ತು ಟ್ವಿಟರ್ಗೆ ಸೂಚನೆ ನೀಡಿತ್ತು.
ಇದೀಗ ಆ ಟ್ವಿಟರ್ ಮೇಲೆ ಕ್ಲಿಕ್ ಮಾಡಿದರೆ "No longer available", "ಈ ಟ್ವೀಟ್ ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದೆ" ಎಂದು ತೋರಿಸುತ್ತಿದೆ.