ಬರೇಲಿ (ಉತ್ತರ ಪ್ರದೇಶ): ದಲಿತ ಯುವತಿಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಲ್ಲದೇ ಆಕೆಯ ಮೇಲೆ ಇಬ್ಬರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿರುವಘಟನೆ ಉತ್ತರ ಪ್ರದೇಶದ ಬರೇಲಿಯ ಹೋಟೆಲ್ವೊಂದರಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಸಂತ್ರಸ್ತೆ ಪ್ರೇಮ್ ನಗರದ ಪೊಲೀಸ್ ವೃತ್ತದ ಸಮೀಪದಲ್ಲಿ ವಾಸಿಸುತ್ತಿದ್ದಳು. ತನ್ನ ಸ್ನೇಹಿತನಿಗೆ 30 ಸಾವಿರ ರೂಪಾಯಿ ಸಾಲ ನೀಡಿದ್ದಳು. ಸೆಪ್ಟೆಂಬರ್ 1 ರಂದು ಹಣ ಹಿಂದಿರುಗಿಸುತ್ತೇನೆ ಎಂದು ಹೇಳಿ ಯುವತಿಯನ್ನು ಸ್ನೇಹಿತ ಹೋಟೆಲ್ಗೆ ಕರೆಸಿಕೊಂಡಿದ್ದಾನೆ. ಹೋಟೆಲ್ಗೆ ಬಂದಾಗ ರೂಮ್‌ನಲ್ಲಿ ಆಕೆಯ ಸ್ನೇಹಿತ ಶಿಫ್ತತ್ ಹಾಗು ಇನ್ನಿಬ್ಬರು ಗೆಳೆಯರಾದ ನದೀಮ್ ಮತ್ತು ಶೋಯೆಬ್ ಇದ್ದರು. ಇವರು ಮೂವರು ಸೇರಿ ಆಕೆಗೆ ಒತ್ತಾಯವಾಗಿ ಗೋಮಾಂಸ ತಿನ್ನಿಸಿದ್ದಾರೆ.
ಬಳಿಕ ಮತ್ತು ಬರುವ ಔಷಧ ಬೆರೆಸಿದ ಪಾನೀಯ ಕುಡಿಸಿದ್ದಾರೆ. ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ನಂತರ ನದೀಮ್ ಮತ್ತು ಶೋಯೆಬ್ ಅತ್ಯಾಚಾರವೆಸಗಿದ್ದಾರೆ. ಸ್ನೇಹಿತ ಶಿಫ್ತತ್ ಕೃತ್ಯದ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಇಟ್ಟುಕೊಂಡು ಆಕೆಯ ಬಳಿ 50 ಸಾವಿರ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ.
ವಿಡಿಯೋವನ್ನು ಆರೋಪಿ, ಸಂತ್ರಸ್ತೆಯ ಭಾವಿ ಪತಿಗೆ ಕಳುಹಿಸಿದ್ದಾನೆ. ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆತ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ತಕ್ಷಣ ಕಾನೂನು ಕ್ರಮ ತೆಗೆದುಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ದಲಿತ ಕಾಯ್ದೆಗಳು ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರನ್ನೂ ಬಂಧಿಸಲಾಗಿದೆ ಎಂದು ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಹೇಳಿದರು.
ಬಾಲಕಿಯನ್ನು ಅಪಹರಿಸಿ ಅತ್ಯಾಚಾರ:ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾ ಎಂಬಲ್ಲಿ ಗುರುವಾರ (ನಿನ್ನೆ) ಮುಂಜಾನೆ ಘಟನೆ ನಡೆದಿದೆ. ವಲಸೆ ಕುಟುಂಬದ 8 ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಮಲಗಿದ್ದಳು. ಬೆಳಗಿನ ಜಾವ 2 ಗಂಟೆಗೆ ಆರೋಪಿ ತಿರುವನಂತಪುರಂನ ಚೆಂಗಲ್ ನಿವಾಸಿ ಕ್ರಿಸ್ಟಲ್ ಮನೆಗೆ ನುಗ್ಗಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ.
ಈತ ಬಾಲಕಿಯನ್ನು ಅಪಹರಿಸುವುದನ್ನು ವ್ಯಕ್ತಿಯೊಬ್ಬರು ನೋಡಿದ್ದು ತಡೆಯಲು ಮುಂದಾದಾಗ ಅವರಿಗೆ ಥಳಿಸಿದ್ದಾನೆ. ಥಳಿತಕ್ಕೊಳಗಾದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿ ಸಮೀಪದ ಗದ್ದೆಯೊಂದರಲ್ಲಿ ಗಾಯಗೊಂಡು ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ.
ಇದನ್ನೂ ಓದಿ:ತಾಯಿಯೊಂದಿಗೆ ಮಲಗಿದ್ದ 8 ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ: ಆರೋಪಿ ಬಂಧನ