ಕರ್ನಾಟಕ

karnataka

ETV Bharat / bharat

ದಲಿತ ಡೆಲಿವರಿ ಬಾಯ್​ನಿಂದ ಆಹಾರ ಪಡೆಯದೇ ನಿಂದಿಸಿದ ಗ್ರಾಹಕ.. ದೂರು ದಾಖಲು

ಡೆಲಿವರಿ ಬಾಯ್​ ದಲಿತ ಎಂಬ ಕಾರಣಕ್ಕಾಗಿ ಆತನಿಂದ ಆಹಾರವನ್ನು ಪಡೆಯದೇ ಜಾತಿ ನಿಂದನೆ ಮಾಡಿ ಅವಮಾನಿಸಿದ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿದೆ.

ದಲಿತ ಡೆಲಿವರಿ ಬಾಯ್​ನಿಂದ ಆಹಾರ ಪಡೆಯದೇ ನಿಂದಿಸಿದ ಗ್ರಾಹಕ
ದಲಿತ ಡೆಲಿವರಿ ಬಾಯ್​ನಿಂದ ಆಹಾರ ಪಡೆಯದೇ ನಿಂದಿಸಿದ ಗ್ರಾಹಕ

By

Published : Jun 20, 2022, 6:13 AM IST

ಲಖನೌ:ಅಸ್ಪೃಷ್ಯತೆ ಆಚರಣೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಉತ್ತರಪ್ರದೇಶದ ಲಖನೌನಲ್ಲಿ ನಡೆದ ಘಟನೆಯೇ ಸಾಕ್ಷಿ. ಝೊಮ್ಯಾಟೋ ಡೆಲಿವರಿ ಬಾಯ್​ ದಲಿತನಾಗಿದ್ದ ಕಾರಣಕ್ಕೆ ಆರ್ಡರ್​ ಮಾಡಿದ್ದ ಆಹಾರವನ್ನು ಆತನಿಂದ ಪಡೆಯದೇ, ಜಾತಿನಿಂದನೆ ಮಾಡಿ ಮೂದಲಿಸಿದ್ದಾರೆ. ಈ ಬಗ್ಗೆ ಡೆಲಿವರಿ ಬಾಯ್​ ದೂರು ನೀಡಿದ್ದಾರೆ.

ಝೊಮ್ಯಾಟೋ ಡೆಲಿವರಿ ಬಾಯ್​ ಆದ ಸೋಮ್​ ಕುಮಾರ್​ ರಾವತ್​ ಅವಮಾನಕ್ಕೀಡಾದವರು. ಸೋಮ್​ಕುಮಾರ್​ ರಾವತ್​ ಗ್ರಾಹಕರೊಬ್ಬರು ಆರ್ಡರ್​ ಮಾಡಿದ ಆಹಾರವನ್ನು ಪಡೆದು ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ, ಗ್ರಾಹಕ ಈತನ ಹೆಸರು ಮತ್ತು ಜಾತಿಯ ಬಗ್ಗೆ ಪ್ರಶ್ನಿಸಿದ್ದಾರೆ.

ಸೋಮ್​ಕುಮಾರ್​ ತಾನು ದಲಿತ ಜಾತಿಗೆ ಸೇರಿದವನು ಎಂದು ಪರಿಚಯಿಸಿಕೊಂಡಾಗ ಆ ಗ್ರಾಹಕ ಆತನನ್ನು ನಿಂದಿಸಿ, ಆಹಾರವನ್ನು ಪಡೆಯದೇ ಅವಮಾನ ಮಾಡಿದ್ದಾನೆ. ಅಲ್ಲದೇ, ಜಾತಿಯನ್ನು ಕೆಟ್ಟದಾಗಿ ನಿಂದಿಸಿ ಮೂದಲಿಸಿದ್ದಾನೆ. ಇದರಿಂದ ಅವಮಾನಿತನಾದ ಸೋಮ್​ಕುಮಾರ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಓದಿ:ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ದಾರುಣ ಸಾವು, ಭೂಕುಸಿತಕ್ಕೆ ವ್ಯಕ್ತಿ ಬಲಿ

ABOUT THE AUTHOR

...view details