ಧರ್ಮಶಾಲಾ:ರಾಷ್ಟ್ರಪತಿ ರಾಮನಾಥ ಕೋವಿಂದ್ ಬೈಪಾಸ್ ಸರ್ಜರಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಟಿಬೇಟಿಯನ್ ಬೌದ್ಧ ಧರ್ಮಗುರು ದಲೈಲಾಮಾ ಆಶಿಸಿದ್ದಾರೆ.
ಕೋವಿಂದ್ ಅವರನ್ನು ಹಳೆಯ ಸ್ನೇಹಿತ ಎಂದು ಪತ್ರದಲ್ಲಿ ತಿಳಿಸಿದ್ದು, ನಿಮ್ಮನ್ನು ಹಲವು ವರ್ಷಗಳಿಂದ ತಿಳಿದುಕೊಂಡಿರುವ ಭಾಗ್ಯ ನನ್ನದಾಗಿದೆ ಎಂದಿದ್ದಾರೆ.