ಹೈದರಾಬಾದ್:ಯುನೈಟೆಡ್ ಸ್ಟೇಟ್ಸ್ನಲ್ಲಿ ಜನಿಸಿದ ಮಂಗೋಲಿಯನ್ ಹುಡುಗನಿಗೆ ಆಧ್ಯಾತ್ಮಿಕ ನಾಯಕ ಎಂಬ ಪಟ್ಟವನ್ನು ದಲೈ ಲಾಮಾ ಅವರು ನೀಡಿದ್ದಾರೆ. ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯ 10ನೇ ಖಲ್ಖಾ ಜೆಟ್ಸನ್ ಧಂಪಾ ರಿಂಪೋಚೆ ಎಂದು ಸ್ಥಾನವನ್ನು ಕೊಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮಾರ್ಚ್ 8ರಂದು ನಡೆದಿದ್ದ ಕಾರ್ಯಕ್ರಮ:ಬೌದ್ಧ ಧರ್ಮಗುರು ವಾಸಿಸುವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 8ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಎಂಟು ವರ್ಷದ ಬಾಲಕನೊಂದಿಗೆ ದಲೈ ಲಾಮಾ ಭಾಗವಹಿಸುತ್ತಿರುವ ಫೋಟೋವನ್ನು ನೋಡಬಹುದು. ಎಂಟು ವರ್ಷದ ಬಾಲಕನೊಬ್ಬ 10ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಆಗಿ ಪುನರ್ಜನ್ಮ ಪಡೆದಿದ್ದಾನೆ. ಇದು ಟಿಬೆಟಿಯನ್ ಬೌದ್ಧಧರ್ಮದಲ್ಲಿ ಮೂರನೇ ಅತ್ಯುನ್ನತ ಸ್ಥಾನವಾಗಿದೆ. ಚೀನಾದ ಹಗೆತನದ ನಡುವೆಯೂ ಆಧ್ಯಾತ್ಮಿಕ ನಾಯಕನ ಸ್ಥಾನಕ್ಕೆ ಆ ಬಾಲಕನ ಹೆಸರನ್ನು ದಲೈ ಲಾಮಾ ಸೂಚಿಸಿದರು.
ಮಗುವಿನ ನಿಜವಾದ ಗುರುತು ಬಹಿರಂಗವಾಗಿಲ್ಲ:ಚಿತ್ರದಲ್ಲಿ ಮಗುವಿಗೆ ಮುಖದ ಕೆಳಭಾಗವನ್ನು ಮುಖವಾಡದಿಂದ ಮುಚ್ಚಿರುವುದು ತೋರಿಸುತ್ತದೆ. ಆ ಮಗುವಿಗೆ ಕೀರಿಟ ತೊಡಿಸುತ್ತಿರುವ ಫೋಟೋದಲ್ಲಿದೆ. ಆ ಮಗುವಿನ ಅವರ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಅಮೆರಿಕದಲ್ಲಿ ಜನಿಸಿದ ಅವಳಿ ಸಹೋದರ ಪೈಕಿ ಒಬ್ಬ ಬಾಲಕ ಮತ್ತು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರ ಮಗ ಹಾಗೂ ಮಾಜಿ ಮಂಗೋಲಿಯನ್ ಸಂಸತ್ತಿನ ಸದಸ್ಯರ ಮೊಮ್ಮಗ. ಸುಮಾರು 600 ಅನುಯಾಯಿಗಳ ಸಮ್ಮುಖದಲ್ಲಿ ಸಮಾರಂಭ ನಡೆಯಿತು. ಆದರೆ, ಧರ್ಮಶಾಲಾದಲ್ಲಿರುವ ದಲೈಲಾಮಾ ಸಂಸ್ಥೆಯು ಮಗುವಿನ ನಿಜವಾದ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ:ಇಕ್ಕಳದಿಂದ ಆರೋಪಿಗಳ ಹಲ್ಲು ಕಿತ್ತಿದ್ದ ಆರೋಪ.. ಐಪಿಎಸ್ ಅಧಿಕಾರಿಗೆ ಸ್ಥಳ ನಿಯುಕ್ತಿ ಮಾಡದೇ ದಿಢೀರ್ ಎತ್ತಂಗಡಿ