ಭಗವಾನ್ ಗೌತಮ ಬುದ್ಧ ಹುಟ್ಟಿದ, ಜ್ಞಾನೋದಯವಾದ ಹಾಗೂ ನಿರ್ವಾಣ ಹೊಂದಿದ ದಿನವನ್ನು ಭಾರತಾದ್ಯಂತ ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಬೌದ್ಧ ಧರ್ಮದ ಧರ್ಮಗುರು ದಲೈ ಲಾಮಾ ಅವರು ವಿಶ್ವಾದ್ಯಂತ ಇರುವ ತಮ್ಮ ಅನುಯಾಯಿಗಳಿಗೆ "ಇತರರ ಕಲ್ಯಾಣಕ್ಕಾಗಿ ಅರ್ಥಪೂರ್ಣವಾದ ಜೀವನವನ್ನು ನಡೆಸುವಂತೆ" ಸಂದೇಶ ನೀಡಿದ್ದಾರೆ.
"ಭಗವಾನ್ ಬುದ್ಧನ ಜನ್ಮ, ಜ್ಞಾನೋದಯ ಮತ್ತು ಮಹಾ ಪರಿನಿರ್ವಾಣದ ಈ ಶುಭ ಸ್ಮರಣೆಯ ಸಂದರ್ಭದಲ್ಲಿ ಪ್ರಪಂಚಾದ್ಯಂತ ವಾಸಿಸುತ್ತಿರುವ ಬೌದ್ಧರಿಗೆ ನನ್ನ ಶುಭಾಶಯಗಳು. ನಮ್ಮ ಧರ್ಮ ಗ್ರಂಥಗಳಲ್ಲಿ ಬೋಧಗಯಾ ಎಂದು ಕರೆಯಲ್ಪಡುವ ಬೌದ್ಧ ಯಾತ್ರಾ ಸ್ಥಳ ಅತ್ಯಂತ ಪವಿತ್ರವಾಗಿದೆ. ಈ ಬೋಧಗಯಾವು ಭಾರತದ ಬಿಹಾರ್ ರಾಜ್ಯದ ಗಯಾ ಜಿಲ್ಲೆಯಲ್ಲಿರುವ ಒಂದು ನಗರ. ಇದನ್ನು ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಬುದ್ಧನು ಜ್ಞಾನೋದಯ (ಮಹಾಬೋಧಿ) ಪಡೆದನು. ಆ ನಂತರ ಅವರು ತಮ್ಮ ನಾಲ್ಕು ಉದಾತ್ತ ಸತ್ಯಗಳು, ಮೂವತ್ತೇಳು ಅಂಶಗಳನ್ನು ಬೋಧಿಸಿದರು. ಜೊತೆಗೆ, ಧ್ಯಾನ ಮಾರ್ಗವು ದುಃಖ ಮತ್ತು ಪಾಪ ಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ ಎಂದು ಇಡೀ ಜಗತ್ತಿಗೆ ತಿಳಿಸಿಕೊಟ್ಟರು" ಎಂದು ಟಿಬೆಟ್‌ನ 14 ನೇ ಧರ್ಮಗುರು ದಲೈ ಲಾಮಾ ಹೇಳಿದರು.
ಇದನ್ನೂ ಓದಿ :ಗೌತಮ ಬುದ್ಧನ ಜನ್ಮಸ್ಥಳದ ಬಗ್ಗೆ ಜೈಶಂಕರ್ ಹೇಳಿಕೆ: ವಿವಾದಕ್ಕೆ ತೆರೆ ಎಳೆದ ಭಾರತ