ಧರ್ಮಶಾಲಾ:ಮಗುವಿನ ತುಟಿಗಳಿಗೆ ಮುತ್ತು ನೀಡಿ, ಆತನಿಗೆ ತನ್ನ ನಾಲಿಗೆಯನ್ನು ಸ್ಪರ್ಶಿಸುವಂತೆ ತಿಳಿಸಿದ ದಲೈಲಾಮಾ ಅವರ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದವನ್ನು ಮನಗಂಡಿರುವ ದಲೈಲಾಮಾ ಇದೀಗ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚಿನ ಘಟನೆಯ ವಿಡಿಯೋ ತುಣುಕು ಪ್ರಸಾರವಾಗಿದೆ. ಬಾಲಕನೊಬ್ಬ ದಲೈಲಾಮಾ ಅವರನ್ನು ತಬ್ಬಿಕೊಳ್ಳಬಹುದೇ ಎಂದು ಕೇಳಿದ. ಈ ಸಂದರ್ಭದಲ್ಲಿ ಅವರು ಮಗುವಿನ ತುಟಿಗಳಿಗೆ ಚುಂಬಿಸಿದ್ದರು. ನಂತರ ಬಾಲಕನಿಗೆ ನಾಲಿಗೆಯನ್ನು ಸ್ಪರ್ಶಿಸುವಂತೆ ಕೇಳಿರುವುದು ವಿಡಿಯೋದಲ್ಲಿದೆ. ತಕ್ಷಣವೇ ಎಚ್ಚೆತ್ತುಕೊಂಡ ದಲೈ ಲಾಮಾ ಅವರು ಹುಡುಗ ಮತ್ತು ಅವರ ಕುಟುಂಬದಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಘಟನೆ ಬಗ್ಗೆ ದಲೈ ಲಾಮಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ ಏನು?:ತಿಂಗಳ ಹಿಂದೆ ನಡೆದ ಕಾರ್ಯಕ್ರಮಯೊಂದರಲ್ಲಿ ದಲೈಲಾಮಾ ಅವರ ಆಶೀರ್ವಾದ ಪಡೆಯಲು ಬಂದ ಬಾಲಕನನ್ನು ಧರ್ಮಗುರುಗಳು ಚುಂಬಿಸಿದರು. ನಂತರ ನಾಲಿಗೆಯನ್ನು ಸ್ಪರ್ಶಿಸಲು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ವಿಡಿಯೋದಲ್ಲಿನ ಧರ್ಮಗುರುಗಳ ನಡುವಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಯಿತು. ಧರ್ಮಗುರುಗಳು ಬಾಲಕನ ಜೊತೆಗೆ ಹೀಗೆ ನಡೆದುಕೊಳ್ಳಬಾರದಿತ್ತು ಎಂದು ಎಲ್ಲೆಡೆ ಭಾರೀ ಟೀಕೆಗಳು ವ್ಯಕ್ತವಾಯಿತು.
'ಸಂಪೂರ್ಣವಾಗಿ ಅನಾರೋಗ್ಯ' ಎಂದ ನೆಟ್ಟಿಗರು ಗರಂ:ನೆಟ್ಟಿಗರು ದಲೈ ಲಾಮಾ ಅವರನ್ನು ತಂಬಾ ಟ್ರೋಲ್ ಮಾಡುತ್ತಿದ್ದಾರೆ. ಧಾರ್ಮಿಕ ಮುಖಂಡರಾಗಿರುವ ಅವರಿಗೆ ಇಂತಹ ವಿಷಯಗಳು ಹಿಡಿಸುವುದಿಲ್ಲವೇ ಎಂಬ ಹಲವರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ನೆಟ್ಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ದಲೈ ಲಾಮಾ ಅವರ ಕ್ರಮಗಳನ್ನು 'ಹಗರಣೀಯ', 'ಅಸಹ್ಯ' ಮತ್ತು 'ಸಂಪೂರ್ಣವಾಗಿ ಅನಾರೋಗ್ಯ' ಎಂದು ವ್ಯಾಖ್ಯಾನಕಾರರು ಕಾಮೆಂಟ್ ಮಾಡಿದರು. 'ಕಪಟ ಸುಳ್ಳು ಪ್ರವಾದಿ' ಎಂದು ಉಳಿದ ನೆಟ್ಟಿಗರು, ದಲೈ ಲಾಮಾ ಅವರ ವಿರುದ್ಧ ಮುಗಿಬಿದ್ದರು.