ಕೋಲ್ಕತ್ತಾ:ಪಶ್ಚಿಮಬಂಗಾಳದ ದಕ್ಷಿಣೇಶ್ವರ ಕಾಳಿ ಮಂದಿರದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಪ್ರಕರಣ 150 ವರ್ಷಗಳಿಂದ ಕೋಲ್ಕತ್ತಾ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಕಳೆದ ವರ್ಷವಷ್ಟೇ ದೇವಸ್ಥಾನದ ಸುಗಮ ಆಡಳಿತಕ್ಕಾಗಿ ಸಚಿವರನ್ನೊಳಗೊಂಡ ಟ್ರಸ್ಟಿಗಳ ಮಂಡಳಿ ರಚನೆಗೂ ಹೈಕೋರ್ಟ್ ಆದೇಶಿಸಿತ್ತು. ಆದರೀಗ ಈ ಚುನಾವಣೆಯೇ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ಮಂಡಳಿಯ ಸದಸ್ಯರಾದ ಚೌಧರಿ ಮತ್ತು ಅವರ ಸಹಚರರು ಚುನಾವಣೆ ನಡೆಸದೇ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕುಶಾಲ್ ಚೌಧರಿ ಮತ್ತು ಅವರ ಸಹಚರರು ಕೋಲ್ಕತ್ತಾ ಹೈಕೋರ್ಟ್ನಲ್ಲಿರುವ ಹಳೆಯ ಪ್ರಕರಣವನ್ನು ಕೆದಕಿದ್ದಾರೆ.
ಉಸ್ತುವಾರಿಯೇ ದೇವಸ್ಥಾನದ ಸಮಸ್ಯೆ:1831 ರಲ್ಲಿ ರಾಣಿ ರಾಸ್ಮೋನಿ ಅವರ ಮರಣದ ಒಂದು ದಿನ ಮೊದಲು ಅವರು ತಮ್ಮ ಎಂಟು ಮೊಮ್ಮಕ್ಕಳಿಗೆ ದೇವಸ್ಥಾನದ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದರು. ಆದರೆ, ರಾಣಿಯ ಮರಣದ ದಶಕದ ನಂತರ ಉಸ್ತುವಾರಿಯ ಬಗ್ಗೆ ವಿವಾದ ಉಂಟಾಯಿತು. ಬಳಿಕ ಇದು ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. 1912 ರಲ್ಲಿ ಹೈಕೋರ್ಟ್ ದೇವಾಲಯದ ನಿರ್ವಹಣೆಗೆ ಮಾರ್ಗಸೂಚಿಯನ್ನು ಹೊರಡಿಸಿತು. ನಂತರ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸಲು ಟ್ರಸ್ಟಿಗಳ ಮಂಡಳಿಯನ್ನು ರಚಿಸಲಾಯಿತು. ಆದರೆ ಇದು ಪರಿಹಾರಕ್ಕಿಂತಲೂ ಕ್ರಮೇಣ ಸಮಸ್ಯೆ ಸೃಷ್ಟಿಸುತ್ತಲೇ ಹೋಯಿತು.