ಕರ್ನಾಟಕ

karnataka

ಈ ರಾಶಿಯವರಿಗೆ ಇಂದು ಯಶಸ್ಸು ಕಟ್ಟಿಟ್ಟ ಬುತ್ತಿ..ನಿಮ್ಮ ರಾಶಿಯೂ ಇದೆಯಾ ಚೆಕ್​​ ಮಾಡಿ!

ಇಂದಿನ ರಾಶಿ ಭವಿಷ್ಯ ಹೀಗಿದೆ..

By

Published : Jul 27, 2022, 5:22 AM IST

Published : Jul 27, 2022, 5:22 AM IST

daily-horoscope-of-wednesday
ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ಯಶಸ್ಸು ಕಟ್ಟಿಟ್ಟ ಬುತ್ತಿ

ಮೇಷ :ನಿಮ್ಮ ದಿನ ಇಂದು ಯಶಸ್ಸಿನ ಬೆಳಕಿನಿಂದ ಹೊಳೆಯುತ್ತಿದೆ. ನೀವು ದೂರದೃಷ್ಟಿ ಉಳ್ಳ ತೀಕ್ಷ್ಣಮತಿಯಾಗಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆ ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಒತ್ತಡ ಕಡಿಮೆ ಇರಲಿ. ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವಶಕ್ತನ ಮೇಲೆ ನಂಬಿಕೆ ಇರಲಿ.

ವೃಷಭ :ಇಂದು ನೀವು ನಿಮ್ಮೊಂದಿಗೆ ಸ್ವಲ್ಪ ಗುಣಮಟ್ಟದ ಸಮಯ ಕಳೆಯಲು ಸೂಕ್ತವಾದ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವು ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಸ್ನೇಹಮಯ ಭೋಜನಕೂಟದೊಂದಿಗೆ ಒಳಗೊಂಡಿರುತ್ತದೆ. ನೀವು ಕಟುವಾದ, ಭರ್ಜರಿಯಾದ ಮತ್ತು ಅತ್ಯಂತ ಸ್ವಾದಿಷ್ಟ ರುಚಿಯನ್ನು ಬಯಸುತ್ತೀರಿ. ನಿಮ್ಮ ಮನಸೋ ಇಚ್ಛೆ ಅದನ್ನು ನೆರವೇರಿಸಿಕೊಳ್ಳಿ.

ಮಿಥುನ : ಇಂದು ನೀವು ಆತಂಕ ಮತ್ತು ಅಸೌಖ್ಯ ಅನುಭವಿಸಬಹುದು ಮತ್ತು ನೀವು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಮಾತ್ರವೇ ನೀವು ಪ್ರೀತಿಸಿದವರ ಗೌಪ್ಯ ಪ್ರೀತಿಯನ್ನು ಪಡೆಯುತ್ತೀರಿ. ಇಲ್ಲಿಯವರೆಗೂ ಆಗಿದ್ದು ಆಗಿಹೋಯಿತು. ಹಳೆಯದನ್ನು ಹಿಂದಕ್ಕೆ ಬಿಡಿ ಮತ್ತು ವಿಶ್ವಾಸದಿಂದ ಉಜ್ವಲ ನಾಳೆಯತ್ತ ಮುನ್ನಡೆಯಿರಿ.

ಕರ್ಕಾಟಕ: ನಿಮ್ಮ ಮನಸ್ಥಿತಿ ಅಥವಾ ಮನಸ್ಸು ಅವಿಶ್ರಾಂತ ಮತ್ತು ಕೆರಳಿಸುವಂತಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳು ನಿಮ್ಮ ಮನೆಬಾಗಿಲು ತಟ್ಟುತ್ತವೆ. ಆದ್ದರಿಂದ ತಾಳ್ಮೆ ಇರಲಿ ಮತ್ತು ಅವುಗಳನ್ನು ಧೈರ್ಯದಿಂದ ಎದುರಿಸಿರಿ. ಈ ಧೈರ್ಯ ನಿಮ್ಮನ್ನು ಅಗೋಚರವಾದ ಯಶಸ್ಸಿನತ್ತ ಮುನ್ನಡೆಸುತ್ತದೆ. ಮುಂಗೋಪದ ಮನೋಭಾವದ ಮನಸ್ಸುಗಳು ಪ್ರತಿಕೂಲತೆಯನ್ನು ಎದುರಿಸಲು ಕಷ್ಟಪಡಬಹುದು.

ಸಿಂಹ :ಇಂದು ನಿರ್ಧಾರಗಳನ್ನು ಕೈಗೊಳ್ಳಲು ಇತರರ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೀರಿ. ನೀವು ಸಂವಹನದಲ್ಲಿ ಇತರರನ್ನು ತಾಳ್ಮೆಯಿಂದ ಆಲಿಸಬೇಕು. ನಿಮ್ಮ ಆತ್ಮವಿಶ್ವಾಸ ಕುಸಿಯುತ್ತಿದೆ. ಆದ್ದರಿಂದ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಕನ್ಯಾ : ನೀವು ಅತ್ಯಂತ ಸ್ಫೂರ್ತಿಯುತವಾಗಿದ್ದೀರಿ. ನಿಮ್ಮ ಸೃಜನಶೀಲ ಪ್ರತಿಭೆಗಳು ಮತ್ತು ಸಾಮರ್ಥ್ಯಗಳು ನಿಮ್ಮ ಶ್ರೇಷ್ಠ ಕಲಾವಿದರಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ನೀವು ನಿಮ್ಮ ಸೃಜನಶೀಲತೆಗೆ ದಾರಿ ಮಾಡಿಕೊಟ್ಟರೆ ಮಾತುಗಳು ಸರಾಗವಾಗಿ ಹರಿದುಬರುತ್ತವೆ. ಮತ್ತು ನೀವು ಹಾಡಲು ಮತ್ತು ನೃತ್ಯ ಮಾಡಲು ಬಯಸಿದರೆ ಎಲ್ಲರ ಕೇಂದ್ರಬಿಂದುವಾಗುತ್ತೀರಿ. ನೀವು ಪ್ರದರ್ಶನ ಕಲೆಗಳು ಅಥವಾ ಬರಹವನ್ನು ಹವ್ಯಾಸಗಳಾಗಿ ಹೊಂದುವುದು ಸೂಕ್ತ.

ತುಲಾ :ಕ್ಷುಲ್ಲಕ ವಿಷಯಗಳ ಕುರಿತು ನೀವು ತಲೆ ಕೆಡಿಸಿಕೊಳ್ಳುವುದು ಅಥವಾ ಆತಂಕಗೊಳ್ಳುವುದು ಅಗತ್ಯವಿಲ್ಲ. ಒತ್ತಡ ನಿವಾರಿಸಲು ಪ್ರಯತ್ನಿಸುವಾಗ ಧ್ಯಾನ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ನೀವು ಅತಿಯಾದ ಕೆಲಸದ ಒತ್ತಡಕ್ಕೆ ಸಿಲುಕಬಹುದು. ಆದ್ದರಿಂದ ಕೆಲಸದಲ್ಲಿ ಅಥವಾ ಮತ್ತಾವುದರಲ್ಲೇ ಆಗಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಕೂಲ ಮತ್ತು ಅನನುಕೂಲಗಳನ್ನು ಅಳೆದು ತೂಗಿರಿ.

ವೃಶ್ಚಿಕ :ಇಂದು ನೀವು ನಿಮ್ಮ ಕೆಲಸದಲ್ಲಿ ಮುಳುಗಿಹೋಗುತ್ತೀರಿ. ಹಗಲಿನ ವೇಳೆ, ನೀವು ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲಿ ತುಂಬಿರುತ್ತೀರಿ. ಆದರೆ, ಸಂಜೆಗೆ ನಿಮ್ಮ ಕಥೆ ಬೇರೆಯದೇ ಆಗಿರುತ್ತದೆ. ಎಂದಿನಂತೆ ಉತ್ಸಾಹದಲ್ಲಿದ್ದು, ನಿಮ್ಮ ಮಿತ್ರರೊಂದಿಗೆ ಹೊರಗಡೆ ಹೋಗಿ ಆರಾಮವಾಗಿ ಕಾಲ ಕಳೆಯಿರಿ.

ಧನು : ಇಂದು ನಿಮ್ಮ ಹಡಗು ಪ್ರಚಂಡ ವಿವಾದದ ಅಲೆಗಳಿಗೆ ಸಿಲುಕಿಕೊಳ್ಳುತ್ತದೆ. ನೀವು ಮನಸ್ಸಿಗೆ ಬಂದಂತೆ ನಿಮಗೆ ಸಲಹೆ ನೀಡುವ ಜನರಿಂದ ದೂರ ಉಳಿಯುವುದು ಉತ್ತಮ. ಎಲ್ಲ ಅಂಶಗಳಿಗೂ ನೀವು ತಾಳ್ಮೆಯಿಂದ ಕಿವಿಗೊಟ್ಟರೆ ಚಂಡಮಾರುತ ತಣ್ಣಗಾಗುತ್ತದೆ ಮತ್ತು ಅವರ ಅಭಿಪ್ರಾಯಗಳನ್ನು ಸ್ವೀಕರಿಸಲು ಪ್ರಯತ್ನಿಸಿ.

ಮಕರ : ಇಂದು ನೀವು ಬೆನ್ನು ಬಾಗುವಷ್ಟು ಕೆಲಸದಲ್ಲಿ ಸಿಲುಕುತ್ತೀರಿ. ದಿನದ ಅಂತ್ಯಕ್ಕೆ ನೀವು ಅತ್ಯಂತ ಆಯಾಸಗೊಳ್ಳುತ್ತೀರಿ. ವ್ಯಾಪಾರ ಜಗತ್ತಿಗೆ ಬಂದರೆ ತೀವ್ರ ಸ್ಪರ್ಧೆಯಿದೆ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಆದರೆ ನೀವೇನೂ ಕಡಿಮೆಯಿಲ್ಲ.

ಕುಂಭ :ಶೈಕ್ಷಣಿಕವಾಗಿ ನೀವು ಅತ್ಯಂತ ಉತ್ತಮ ಸಾಧನೆ ಮಾಡಿದ್ದೀರಿ. ನೀವು ಸಾಕಷ್ಟು ಜನರಿಗೆ ಸ್ಫೂರ್ತಿ ತುಂಬುತ್ತೀರಿ ಮತ್ತು ಉತ್ತೇಜಿಸುತ್ತೀರಿ ಮತ್ತು ಅಭಿಮಾನಿಗಳನ್ನೂ ಗಳಿಸುತ್ತೀರಿ. ಆದರೆ ಇದರ ಅರ್ಥ ನೀವು ಎದೆಯುಬ್ಬಿಸಿ ನಡೆಯಬೇಕಿಲ್ಲ. ಇತರರ ಕುರಿತು ವಿನಯ ಹಾಗೂ ಸೌಜನ್ಯಪೂರಿತರಾಗಿರಿ.

ಮೀನ :ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವವರು ಇಂದು ಉತ್ತಮ ಸಾಧನೆ ತೋರುತ್ತಾರೆ. ವ್ಯಾಪಾರಕ್ಕೆ ಇದು ಒಳ್ಳೆಯ ದಿನ. ನಿಮ್ಮ ಉದ್ಯೋಗ-ವ್ಯಾಪಾರದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಮಾಡಲು ನೀವು ಶಕ್ತರಾಗುತ್ತೀರಿ. ದೇವರ ಕೃಪೆಯಿಂದ ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ, ಆದರೆ ನೀವು ನಿರುತ್ಸಾಹಗೊಳ್ಳದೆ ಕಠಿಣ ಪರಿಶ್ರಮ ಪಡಬೇಕು.

ABOUT THE AUTHOR

...view details