ಕರ್ನಾಟಕ

karnataka

ETV Bharat / bharat

ಮಂಗಳವಾರದ ದಿನ ಭವಿಷ್ಯ: ಈ ದಿನ ನೀವು ಶಾಂತವಾಗಿರಿ, ಅಲೆ ಬಂದಂತೆ ಸಾಗಿ

ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ ನೋಡಿ.

ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಭವಿಷ್ಯ

By

Published : Jan 3, 2023, 6:42 AM IST

ಮೇಷ:ಸ್ವಾತಂತ್ರ್ಯ, ನೀವು ಮಾಡುವ ಪ್ರತಿ ಕೆಲಸದಲ್ಲಿಯೂ ಬಯಸುತ್ತೀರಿ. ನಿಮ್ಮ ಈ ದಿನ ವಿವಿಧ ಬಗೆಯ ಕೌಟುಂಬಿಕ ವ್ಯವಹಾರಗಳಲ್ಲಿ ತುಂಬಿರುತ್ತದೆ. ಹದಿವಯಸ್ಕರು ಅವರ ದಿನವನ್ನು ಶಾಪಿಂಗ್ ಹೋಗುವ ಅಥವಾ ಚಲನಚಿತ್ರ ವೀಕ್ಷಿಸುವ ಮೂಲಕ ಕಳೆಯುತ್ತಾರೆ, ಸಣ್ಣ ಮಕ್ಕಳು ನಿಮ್ಮಿಂದ ತಿಂಡಿ ಕೊಡಿಸಿಕೊಳ್ಳಲು ರಚ್ಚೆ ಹಿಡಿಯಬಹುದು.

ವೃಷಭ:ಇಂದು ನೀವು ನಾರ್ಸಿಸಿಸಂ(ಸ್ವಯಂ ಮೆಚ್ಚುಗೆ) ಭಾವನೆ ಹೊಂದುವುದರಿಂದ ಯಾರಿಗೂ ದೊರೆಯುವ ಮನಸ್ಸಿನಲ್ಲಿಲ್ಲ. ಅದನ್ನು ತಪ್ಪಿಸಲು, ನಿಮ್ಮನ್ನು ಪ್ರೀತಿಸುವವರನ್ನು ಕೇಳಿರಿ, ಅದರಿಂದ ಕೊಂಚ ಸಂವೇದನಾಶೀಲತೆ ಮತ್ತು ಅರ್ಥೈಸಿಕೊಳ್ಳುವಿಕೆ ಸಾಧ್ಯವಾಗುತ್ತದೆ.

ಮಿಥುನ: ನಿಮ್ಮ ಸಾಮಾಜಿಕ ವೃತ್ತದ ಜನರು ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.

ಕರ್ಕಾಟಕ: ದೇವರ ಆಶೀರ್ವಾದ ನಿಮಗೆ ಇಂದು ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಪೂರ್ಣಗೊಳ್ಳದ ಕಾರ್ಯಗಳನ್ನು ಮುಗಿಸಿ ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯವಾಗಿದೆ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.

ಸಿಂಹ:ನೀವು ಮನೆಯಲ್ಲಿನ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತೀರಿ. ನೀವು ಮನೆ ನವೀಕರಣ ಯೋಜನೆಗಳನ್ನು ಕೈಗೊಳ್ಳಬಹುದು. ನಿಮ್ಮ ಸ್ಥಳವೂ ಒಳಗೊಂಡು ಇಡೀ ಪೀಠೋಪಕರಣ ಬದಲಾಯಿಸುತ್ತೀರಿ. ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರೊಂದಿಗೆ ದಿನವನ್ನು ಆನಂದಿಸುತ್ತಾ ಕಳೆಯುತ್ತೀರಿ.

ಕನ್ಯಾ: ಮಕ್ಕಳು ಇಂದು ತರಗತಿಯ ಒಳಗೆ ಹಾಗೂ ಹೊರಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಾರೆ. ನಿಮ್ಮ ತಾರ್ಕಿಕ ಸಾಮರ್ಥ್ಯಗಳು ಸದೃಢವಾಗುತ್ತವೆ. ಶಾಂತಯುತವಾಗಿರಲು ಪ್ರಯತ್ನಿಸಿ, ಅಲೆ ಬಂದಂತೆ ಸಾಗುತ್ತಿರಿ ಮತ್ತು ಈ ದಿನ ಏನೇ ಆಗಲಿ, ನೀವು ಆನಂದಿಸಿರಿ.

ತುಲಾ: ವಿವಾಹಿತರು ಅಥವಾ ಪ್ರೀತಿಯಲ್ಲಿರುವ ನೀವು ಇಂದು ಒಳ್ಳೆಯ ಸಮಯ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಡ್ರೈವ್ ಹೋಗುವ ಅಥವಾ ಡಿನ್ನರ್ ಗೆ ಕರೆದೊಯ್ಯುವ ಮೂಲಕ ಹೆಚ್ಚು ಸಮಯ ಕಳೆದಂತೆ ನೀವು ಅವರಿಗೆ ಹತ್ತಿರವಾಗುತ್ತೀರಿ. ಇಂದು ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ.

ವೃಶ್ಚಿಕ: ಭಾರತದ ಪವಿತ್ರಗ್ರಂಥಗಳು ನಮಗೆ ಅನಾದಿ ಕಾಲದಿಂದಲೂ ನಿಮ್ಮ ಕಾರ್ಯವನ್ನು ನೀವು ಮಾಡಿ, ಫಲಾಫಲಗಳ ನಿರೀಕ್ಷೆ ಮಾಡಬೇಡಿ ಎಂದು ಹೇಳಿವೆ. ಈಗ ಅದನ್ನು ಮುಖ್ಯವಾಗಿ ಕೆಲಸದಲ್ಲಿ ಅನುಷ್ಠಾನಗೊಳಿಸುವ ಕಾಲ. ನಿಮ್ಮ ವ್ಯಾಪಾರ ಮತ್ತು ಜಂಟಿ ಸಹಯೋಗದ ಉದ್ಯಮದಲ್ಲಿ ಕೊಂಚ ಹೆಚ್ಚು ಕಾಯಬೇಕಾಗಬಹುದು. ಆದಾಗ್ಯೂ, ತಾಳ್ಮೆ ನೀಡುವ ಪ್ರತಿಫಲ ಸಿಹಿಯಾಗಿರುವುದರಿಂದ ಭರವಸೆ ಕಳೆದುಕೊಳ್ಳಬೇಡಿ.

ಧನು:ಆತಂಕಗಳ ಮೋಡಗಳು ನಿಮ್ಮನ್ನು ಅಂಧಕಾರದಲ್ಲಿರಿಸುವ ಸಾಧ್ಯತೆ ಇದೆ. ಆ ಮೋಡಗಳನ್ನು ಸಿಡಿಸಲು ಸಿದ್ಧರಾಗಿ, ಮತ್ತು ನಿಮ್ಮ ತೊಂದರೆಗಳನ್ನು ಪರಿಹರಿಸಲು ನೆರವಾಗುವ ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಸನ್ನಿವೇಶ ಸಹಜಸ್ಥಿತಿಗೆ ಬರಲು ಬಯಸಿದರೆ ಅದು ಕೊಂಚ ತಡವಾಗಬಹುದು. ಆದಾಗ್ಯೂ, ದಿನದ ಅಂತ್ಯಕ್ಕೆ ಅನುಕೂಲ ಪಡೆಯುವವರಲ್ಲಿ ನೀವು ಕೂಡಾ ಒಬ್ಬರು!

ಮಕರ: ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.

ಕುಂಭ: ಸಮಾಜದ ವಿವಿಧ ವಲಯಗಳನ್ನು ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.

ಮೀನ: ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.

ABOUT THE AUTHOR

...view details