ಕರ್ನಾಟಕ

karnataka

ETV Bharat / bharat

ಗುರುವಾರದ ದಿನ ಭವಿಷ್ಯ; ಈ ರಾಶಿಯವರು ಇಂದು ಅತ್ಯಂತ ಆತ್ಮವಿಶ್ವಾಸದಿಂದ ಇರ್ತಾರೆ! - ರಾಶಿ ಭವಿಷ್ಯ

ಗುರುವಾರದ ರಾಶಿ ಭವಿಷ್ಯ ಹೀಗಿದೆ.

ಗುರುವಾರದ ದಿನ ಭವಿಷ್ಯ
ಗುರುವಾರದ ದಿನ ಭವಿಷ್ಯ

By ETV Bharat Karnataka Team

Published : Nov 30, 2023, 4:57 AM IST

ಇಂದಿನ ಪಂಚಾಂಗ

ದಿನಾಂಕ: 30-11-2023, ಗುರುವಾರ

ಸಂವತ್ಸರ:ಶುಭಕೃತ್

ಆಯನ:ದಕ್ಷಿಣಾಯಣ

ಋತು:ಹೇಮಂತ

ಮಾಸ:ಕಾರ್ತಿಕ

ಪಕ್ಷ:ಕೃಷ್ಣ

ತಿಥಿ:ತೃತೀಯಾ

ನಕ್ಷತ್ರ:ಆದ್ರ

ಸೂರ್ಯೋದಯ:ಮುಂಜಾನೆ06:24:00 ಗಂಟೆಗೆ

ಅಮೃತಕಾಲ:ಮುಂಜಾನೆ 09:15 ರಿಂದ 10:41 ಗಂಟೆವರೆಗೆ

ರಾಹುಕಾಲ:ಬೆಳಗ್ಗೆ10:24 ರಿಂದ 11:12 ಹಾಗೂ 15:12 ರಿಂದ 16:00 ಗಂಟೆವರೆಗೆ

ದುರ್ಮುಹೂರ್ತಂ:ಮಧ್ಯಾಹ್ನ13:31 ರಿಂದ 14:57 ಗಂಟೆವರೆಗೆ

ಸೂರ್ಯಾಸ್ತ:ಸಂಜೆ05:48:00 ಗಂಟೆವರೆಗೆ

ವರ್ಜ್ಯಂ :ಸಂಜೆ18:15 ರಿಂದ 19:50 ಗಂಟೆವರೆಗೆ

ಮೇಷ :ಇಂದು ಯಾವುದೇ ದಿನದಂತೆ ಒಪ್ಪಬಲ್ಲ ದಿನವಾಗಿದೆ. ನೀವು ನಿಮ್ಮಲ್ಲಿ ಏನಿದೆಯೋ ಅದರಿಂದ ಸಂತೃಪ್ತರಾಗುತ್ತೀರಿ. ಅಲ್ಲದೆ, ನೀವು ಏನು ಬಯಸುತ್ತೀರಿ ಎಂದು ಯೋಜಿಸಿದ್ದೀರೋ ಅದರತ್ತ ಹೊರಳುತ್ತೀರಿ. ಪ್ರಣಯದ ಜೊತೆ ಆಸಕ್ತಿದಾಯಕವಾಗಬಹುದು ಅಥವಾ ಅದು ವಿವಾದಕ್ಕೆ ಎಡೆ ಮಾಡಿಕೊಡಬಹುದು; ನೀವು ಅದನ್ನು ನಿರ್ಧರಿಸಬೇಕು.

ವೃಷಭ : ನಿಮ್ಮ ಕಾರ್ಯದೊತ್ತಡದಿಂದ ಕೊಂಚ ಬಿಡುವು ಪಡೆದು ಕೊಂಚ ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ. ಆದ್ದರಿಂದ, ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನು ವಿನೋದ ತುಂಬಿದ ಸಂಜೆಗೆ ಮತ್ತು ನಂತರ ಡಿನ್ನರ್ ಹಾಗೂ ತಡರಾತ್ರಿಯ ಚಲನಚಿತ್ರಕ್ಕೆ ಕೊಂಡೊಯ್ಯುತ್ತೀರಿ. ಬಿಸಿ ಮಸಾಲೆ ಮತ್ತು ಸ್ವಾದಿಷ್ಟ ತಿನಿಸು ತಿನ್ನುವ ಬಯಕೆ ನಿಮಗೆ ಒಳ್ಳೆಯದನ್ನೇ ತರುತ್ತದೆ. ಆದ್ದರಿಂದ ಮುನ್ನುಗ್ಗಿರಿ, ಆನಂದಿಸಿರಿ.

ಮಿಥುನ : ನೀವು ಇಂದು ಅತ್ಯಂತ ಒತ್ತಡ ಹಾಗೂ ಬೇಡಿಕೆಯ ದಿನವನ್ನು ಇಂದು ಎದುರಿಸುತ್ತೀರಿ. ನೀವು ಇಡೀ ದಿನವನ್ನು ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಂದು ದಾರಿಗೆ ತರುವುದು ಹೇಗೆಂದು ಆಲೋಚಿಸುತ್ತೀರುತ್ತೀರಿ. ಮೂಡ್ ಏರಿಳಿತಗಳನ್ನೂ ನೀವು ಎದುರಿಸಬಹುದು. ಧ್ಯಾನದ ತಂತ್ರಗಳು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತವೆ.

ಕರ್ಕಾಟಕ: ನೀವು ಮನೆಯಲ್ಲಿ ಹೊಸರುಚಿಗಳನ್ನು ಪ್ರಯತ್ನಿಸುವ ಉಮೇದಿನಲ್ಲಿರುತ್ತೀರಿ. ಕುಟುಂಬದ ಸದಸ್ಯರು ಇದರ ಪ್ರಯೋಜನ ಪಡೆದುಕೊಂಡು ಆನಂದಿಸುತ್ತಾರೆ. ನೀವು ಕಾಲಕ್ಷೇಪ ಮಾಡುತ್ತೀರಿ. ಅತಿಥಿಗಳ ಆಗಮನ ಹಬ್ಬ ಮತ್ತು ಸಂತೋಷದ ವಾತಾವರಣ ಮೂಡಿಸುತ್ತದೆ.

ಸಿಂಹ : ನೀವು ಅಸಾಧಾರಣ ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ಮತ್ತು ಅಪಾರ ರಿಸ್ಕ್​ಗಳನ್ನು ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ. ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಾಣಲು ಶಕ್ತರಾಗುತ್ತಾರೆ. ನಿಮ್ಮ ದಾರಿಯಲ್ಲಿ ಎದುರಾಗುವ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮ್ಮ ಇಡೀ ಶಕ್ತಿ ಬಳಸಿ ಸಫಲರಾಗುತ್ತೀರಿ. ಇದು ನಿಮಗೆ ಒಳ್ಳೆಯ ದಿನವಾಗಿದೆ. ವದಂತಿಗಳನ್ನು ನಿಯಂತ್ರಿಸಿರಿ.

ಕನ್ಯಾ : ನಿಮ್ಮತ್ತ ಎಸೆಯಲಾಗಿರುವ ಹಣಕಾಸಿನ ಸವಾಲುಗಳನ್ನು ನೀವು ಪ್ರೀತಿಸುವುದು ಖಂಡಿತವಾಗಿಯೂ ಸಾಧ್ಯ. ಅವು ನಿಮ್ಮ ಯಶಸ್ಸಿಗೆ ನಿಮ್ಮನ್ನು ಮತ್ತಷ್ಟು ಸಾಣೆ ಹಿಡಿಯುತ್ತವೆ. ನೀವು ಸಮಸ್ಯೆ ಪರಿಹಾರದ ಆವಿಷ್ಕಾರಕ ಆಲೋಚನೆಗಳು ಮತ್ತು ಸುಧಾರಿತ ವಿಧಾನಗಳನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಪ್ರಸ್ತುತದ ವ್ಯಾಪಾರದ ಆಲೋಚನೆಗಳು ಅದ್ಭುತಗಳನ್ನು ಉಂಟು ಮಾಡಲಿವೆ.

ತುಲಾ : ನಿಮ್ಮಲ್ಲಿರುವ ಒಳಗಿನ ಕಲಾವಿದ ಇಂದು ಮೇಲೆ ಬರುತ್ತಾನೆ ಮತ್ತು ನೀವು ನಿಮ್ಮ ಕಲ್ಪನಾಶಕ್ತಿಯನ್ನೂ ಪ್ರದರ್ಶಿಸುತ್ತೀರಿ. ನೀವು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಮತ್ತಷ್ಟು ಮುಂದೆ ಸಾಗುತ್ತಾರೆ. ನೀವು ಇಂದು ಅನುಕೂಲಕರ ಕಾನೂನು ವ್ಯವಹಾರಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.

ವೃಶ್ಚಿಕ : ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ನೀವು ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯದ ಪ್ರಾರಂಭ ಮಾಡುತ್ತೀರಿ.

ಧನು :ಈ ದಿನ ಸಂಪೂರ್ಣ ಜಾಗರೂಕತೆಯ ದಿನವಾಗಿದೆ. ನಿಮ್ಮ ಹೃದಯ ಅದರ ಸಂಗಾತಿಯನ್ನು ಕಂಡುಕೊಳ್ಳುವ ದಿನವಾಗಿದ್ದು, ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ನೀವು ಪ್ರಣಯದೇವತೆಯ ಮುಂದಿನ ಬಲಿಪಶು. ಆದಾಗ್ಯೂ, ನಿಮ್ಮ ಹೆಜ್ಜೆಗಳನ್ನು ಗಮನಿಸಿ, ಬಾಂಧವ್ಯದ ಪ್ರಾರಂಭಿಕ ಹಂತಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಅಲ್ಲದೆ, ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಬೇಕಾದ ಸಮಯವಾಗಿದೆ.

ಮಕರ : ನಿಮ್ಮ ಪ್ರಿಯತಮೆ ಇಂದು ಹಲವು ಆಶ್ಚರ್ಯಗಳನ್ನು ಎದುರಿಸುತ್ತಾರೆ. ನೀವು ಅತ್ಯಂತ ಪ್ರಣಯದ ಮನಸ್ಥಿತಿಯಲ್ಲಿದ್ದು, ನಿಮ್ಮ ಪ್ರಿಯತಮೆ ನಿಮಗೆ ಹೇಳುವ ಪ್ರತಿಯೊಂದು ಬಯಕೆಯನ್ನೂ ಈಡೇರಿಸುತ್ತೀರಿ. ನೀವಿಬ್ಬರೂ ಶಾಪಿಂಗ್ ನಡೆಸಿ ಆನಂದಿಸುತ್ತೀರಿ. ಅತಿಯಾದ ಖರ್ಚುಗಳು ನಿಮ್ಮನ್ನು ಇಂದು ಉತ್ಸಾಹದಲ್ಲಿರಿಸುತ್ತವೆ. ನಿಮ್ಮ ಪ್ರಿಯತಮೆಯ ಸಂತೋಷ ನಿಮಗೆ ಬೇಕಾಗಿದ್ದು, ಅದನ್ನು ನೀವು ಸಾಧಿಸುತ್ತೀರಿ. ಆದರೆ, ದಿನದ ಅಂತ್ಯಕ್ಕೆ, ನಿಮ್ಮ ಜೇಬು ಖಾಲಿಯಾಗಿದ್ದಕ್ಕೆ ವಿಷಾದಪಡುತ್ತೀರಿ.

ಕುಂಭ :ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ. ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ. ಆದಾಗ್ಯೂ, ಒಮ್ಮೆ ಅಂತಹ ಪರಿಸ್ಥಿತಿಗೆ ಬಂದರೆ ನೀವು ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರಲ್ಲಿಯೇ ಆನಂದವನ್ನೂ ಅನುಭವಿಸುತ್ತೀರಿ. ನಿಮ್ಮ ದೊಡ್ಡ ಅನುಕೂಲವೆಂದರೆ ಕೊರತೆಯನ್ನು ಸಾಮರ್ಥ್ಯವಾಗಿ ಪರಿವರ್ತಿಸುವುದು.

ಮೀನ : ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ ಮತ್ತು ನೀವು ಯಾವುದೇ ಒಳಬರುವ ತೊಂದರೆಗಳನ್ನು ನಿವಾರಿಸಲು ಶಕ್ತರಾಗುತ್ತೀರಿ. ಇಂದು ವಾಸ್ತವಗೊಳ್ಳುವ ದಿನ ಮತ್ತು ಬಹಳ ದೀರ್ಘಕಾಲದಿಂದ ಶ್ರಮಿಸುತ್ತಿರುವ ಯೋಜನೆಗಳು, ಮತ್ತಿತರೆ ಸಂಗತಿಗಳು ಪೂರ್ಣಗೊಳ್ಳಲು ಹತ್ತಿರವಾಗುತ್ತವೆ ಮತ್ತು ಫಲ ನೀಡಲು ಪ್ರಾರಂಭಿಸುತ್ತವೆ.

ABOUT THE AUTHOR

...view details