ಕರ್ನಾಟಕ

karnataka

ETV Bharat / bharat

ಗುರುವಾರದ ದಿನ ಭವಿಷ್ಯ... ಯಾವ ರಾಶಿಯಲ್ಲಿ ಏನಿದೆ? - DAILY HOROSCOPE OF THURSDAY

ಗುರುವಾರದ ರಾಶಿ ಭವಿಷ್ಯ ಹೀಗಿದೆ...

DAILY HOROSCOPE OF THURSDAY
ಗುರುವಾರದ ದಿನ ಭವಿಷ್ಯ

By

Published : Mar 16, 2023, 4:01 AM IST

Updated : Mar 16, 2023, 5:57 AM IST

ಮೇಷ:ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ ಎಂದು ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ನೀವು ಹೆಚ್ಚು ಸಂಘಟಿತರಾಗಬೇಕು. ಯಾವುದೇ ರೀತಿಯಲ್ಲಿಯೂ ಕೆಲಸ ಮಾಡಲು ಶ್ರಮ ವಹಿಸಿ..

ವೃಷಭ:ನೀವು ಕಾಲದೊಂದಿಗೆ ನಿಮ್ಮ ವಿಧಾನವನ್ನು ಮೃದುಗೊಳಿಸಿ. ನೀವು ಬಳಸುವ ಅನಿಯಂತ್ರಿತ ವಿಧಾನಕ್ಕಿಂತ ಹೆಚ್ಚು ಪಾರದರ್ಶಕ ರೀತಿಯ ನಾಯಕತ್ವದತ್ತ ಮುನ್ನಡೆಯಬೇಕು. ಇದರೊಂದಿಗೆ ನೀವು ಯಶಸ್ಸು ಗಳಿಸುತ್ತೀರಿ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ನಿಮ್ಮ ಬದ್ಧತೆಯನ್ನು ತೋರುತ್ತೀರಿ.

ಮಿಥುನ:ನಿಮಗೆ ಸಕಾರಾತ್ಮಕ ಮತ್ತು ಸಂತೋಷದ ಫಲಿತಾಂಶಗಳು ಲಭಿಸುತ್ತವೆ. ಸಾರ್ವಜನಿಕ ಸೇವೆಯಲ್ಲಿರುವವರು ಮೇಲಧಿಕಾರಿ ಮತ್ತು ಕುಟುಂಬ ಸದಸ್ಯರಿಂದ ಉತ್ತೇಜನ ಪಡೆಯುತ್ತೀರಿ. ಶೈಕ್ಷಣಿಕವಾಗಿ, ನೀವು ನಿಮ್ಮ ಮನಸ್ಸಿನಲ್ಲಿ ಮೂಡುವ ಯಾವುದೇ ಸಮಸ್ಯೆಯನ್ನೂ ಪರಿಹರಿಸಲು ಶಕ್ತರಾಗುತ್ತೀರಿ.

ಕರ್ಕಾಟಕ:ಇಂದು, ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತಮನಸ್ಸಿನಿಂದ ಇರಬೇಕು. ಸಂಜೆ ನೀವು ಕುಟುಂಬ ಹಾಗೂ ಮಿತ್ರರ ಜೊತೆಯಲ್ಲಿ ಸಂತಸ ವಾತಾವರಣ ನಿರ್ಮಾಣವಾಗಲಿದೆ.

ಸಿಂಹ:ಪ್ರಶಂಸೆಗಳ ಸುರಿಮಳೆಗೆ ಸಜ್ಜಾಗಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹಾಕಿರುವ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದ ಫಲ ಈಗ ದೊರೆಯಲಿದೆ. ಅದರಲ್ಲೂ ಅದು ನೀವು ಕೈಗೊಂಡ ಹೊಸ ಯೋಜನೆಯಾಗಿದ್ದಲ್ಲಿ ಇದು ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಮೇಲಾಧಿಕಾರಿಗಳ ಶುಭಾಕಾಂಕ್ಷೆಗಳ ಬೆಂಬಲದೊಂದಿಗೆ ಬಂದಿದೆ.

ಕನ್ಯಾ:ನೀವು ಯಶಸ್ವಿಯಾಗಲು ಇರುವ ತೀವ್ರ ಬಯಕೆ ನಿಮ್ಮ ಗುರಿಯತ್ತ ಪ್ರಯತ್ನಿಸುತ್ತಿರಲು ನಿಮ್ಮನ್ನು ಉತ್ತೇಜಿಸುತ್ತದೆ. ನಿಮ್ಮ ನಿರ್ಧಾರ ಕೈಗೊಳ್ಳುವ ಮತ್ತು ತಾರ್ಕಿಕ ಕೌಶಲ್ಯಗಳು ನಿಮ್ಮ ನಿರ್ವಹಣೆಯ ಕೌಶಲ್ಯಗಳನ್ನು ಹೆಚ್ಚಾಗಿಸುತ್ತವೆ.

ತುಲಾ:ಇಂದು ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳನ್ನು ವ್ಯಾಪಾರದಲ್ಲಿ ನಿಮ್ಮ ಯಶಸ್ಸಿನ ಕುರಿತು ಅಸೂಯೆ ಪಡುವಂತೆ ಮಾಡುತ್ತದೆ. ಅವರು ನಿಮ್ಮ ಪ್ರತಿಷ್ಠೆಯನ್ನು ನೋಯಿಸಲು ಅಥವಾ ಕುಂದಿಸಲು ಹಲವು ವಿಧಗಳಲ್ಲಿ ಪ್ರಯತ್ನಿಸಬಹುದು. ಅವರೊಂದಿಗೆ ಹೊಡೆದಾಡುವ ಬದಲು ನೀವು ರಾಜಕೀಯವಾಗಿ ಸರಿಯಾಗಿರಲು ಯತ್ನಿಸಿ ನಿಮ್ಮ ಜಾಣ್ಮೆ ಬಳಸಿ ವಿಷಯಗಳನ್ನು ಇತ್ಯರ್ಥಪಡಿಸಬಹುದು.

ವೃಶ್ಚಿಕ: ನಿಮ್ಮ ಮನಸ್ಸಿನಲ್ಲಿ ಮಹತ್ತರ ಪರಿಣಾಮ ಬೀರಲಿದೆ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ನೀವು ಹೊಸ ವ್ಯಾಪಾರೋದ್ಯಮಕ್ಕೆ ಪ್ರವೇಶಿಸಿದಂತೆ ನಿಮ್ಮ ಪ್ರಯತ್ನಗಳಿಗೆ ಗೆಲುವು ದೊರೆಯುತ್ತದೆ.

ಧನು:ಇಂದು ನಿಮ್ಮ ಪ್ರವೃತ್ತಿ ಮತ್ತು ನಿಮ್ಮ ನೋಟದಲ್ಲಿ ಸಂಪೂರ್ಣ ಬದಲಾವಣೆ ಕಾದಿದೆ. ನೀವು ಶ್ಲಾಘಿಸುವ ಅಸಂಖ್ಯ ಜನರನ್ನು ವಶೀಕರಿಸುತ್ತೀರಿ ಮತ್ತು ಅವರು ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ.

ಮಕರ: ಹಣ ಇಂದು ನಿಮಗೆ ಹಲವು ಮೂಲಗಳಿಂದ ಹರಿದು ಬರುತ್ತಿದೆ. ನೀವು ಎಲ್ಲವನ್ನೂ ಖರ್ಚು ಮಾಡಲು ಬಯಸುತ್ತೀರಿ. ಹಾಗೆ ಮಾಡದೆ ಎಷ್ಟು ಸಾಧ್ಯವೋ ಅಷ್ಟು ಉಳಿಸಿ. ನಿಮ್ಮ ಸೃಜನಶೀಲ ಸಾಮರ್ಥ್ಯಗಳಿಂದ ಎಲ್ಲ ಅಡೆತಡೆಗಳನ್ನೂ ಮೀರುತ್ತೀರಿ.

ಕುಂಭ:ನಿಮ್ಮ ಕನಸಿನ ಮನೆ ನನಸಾಗಿದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಅದನ್ನು ಮಾಡಲು ಸಲಹೆ ನೀಡಲಾಗಿದೆ. ದಿನದ ಅಂತ್ಯಕ್ಕೆ ನೀವು ಸಾಧಿಸಿರುವುದರ ಕುರಿತು ಸಂತೃಪ್ತರಾಗಿರುತ್ತೀರಿ.

ಮೀನ:ಒಳ್ಳೆಯ ದಿನ ನಿಮಗಾಗಿ ಕಾದಿದೆ. ನೀವು ಕೆಲಸವನ್ನು ಪೂರ್ಣಗೊಳಿಸಲು ಬಯಸುತ್ತಿರಿ. ಅದಕ್ಕೆ ಕಾರಣ ಅದೃಷ್ಟ ನಿಮ್ಮ ಕಡೆಗಿದೆ. ಕುಟುಂಬದ ರಜಾದಿನದ ಅವಕಾಶಗಳಿವೆ. ಅದನ್ನು ದೀರ್ಘ ಸಮಯದಿಂದ ಯೋಜಿಸಲಾಗುತ್ತಿದ್ದು, ಈ ದಿನ ಸಾಧ್ಯವಾಗಬಹುದು.

Last Updated : Mar 16, 2023, 5:57 AM IST

ABOUT THE AUTHOR

...view details