ಕರ್ನಾಟಕ

karnataka

ETV Bharat / bharat

ಮಂಗಳವಾರದ ರಾಶಿ ಭವಿಷ್ಯ ಇಲ್ಲಿದೆ... ಯಾರಿಗೆ ಲಾಭ, ನಷ್ಟ? - Today horoscope

ಈ ದಿನದ ನಿಮ್ಮ ಭವಿಷ್ಯ ಇಲ್ಲಿದೆ...

Daily horoscope of sept 28th, 2021
ಮಂಗಳವಾರದ ರಾಶಿ ಭವಿಷ್ಯ

By

Published : Sep 28, 2021, 6:10 AM IST

ಮೇಷ: ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನೀವು ಸಂಪತ್ತು ಮತ್ತು ಆನಂದ ತಂದುಕೊಡುತ್ತೀರಿ. ಯಾವುದೂ ಉಚಿತವಾಗಿ ದೊರೆಯುವುದಿಲ್ಲ. ನಿಮ್ಮ ಜೊತೆ ಕಮಿಟ್​ ಆದವರು ತಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಕಮಿಟ್ ಆಗದೇ ಇರುವವರು ಪ್ರೀತಿಯಲ್ಲಿ ಬೀಳುತ್ತಾರೆ.

ವೃಷಭ :ಈ ದಿನ ಸಂಪತ್ತಿನ ವಿಷಯದಲ್ಲಿ ಸುವರ್ಣಾವಕಾಶ ತರಲಿದೆ. ಆರೋಗ್ಯ ಮತ್ತು ಸಂಪತ್ತು ಎರಡೂ ಈ ದಿನ ನಿಮ್ಮ ಕಡೆಗಿವೆ. ಆಭರಣ ವಿನಿಮಯ ನಿಮ್ಮ ಬಾಂಧವ್ಯದಲ್ಲಿ ಕಿಡಿಯನ್ನು ತರಲಿದೆ. ನೀವು ಮೋಸಗೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ.

ಮಿಥುನ:ಇಂದು ನೀವು ಸಣ್ಣ ಪ್ರವಾಸ ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅದು ಕೆಲಸಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಸಂತೋಷಕ್ಕೆ ಆಗಿರಬಹುದು. ಕೆಲಸದ ನಡುವೆ ವಿಶ್ರಾಂತಿಗೆ ನೀವು ಗಮನ ನೀಡುವುದಿಲ್ಲ ಮತ್ತು ಸಂಜೆ ನೀವು ನಿಮ್ಮಂತೆಯೆ ಆಲೋಚಿಸುವ ಜನರ ಜೊತೆಯಲ್ಲಿ ಬೆರೆಯುತ್ತೀರಿ.

ಕರ್ಕಾಟಕ:ನಿಮ್ಮ ಗಮನ ಸಾಮಾಜಿಕ ಬದ್ಧತೆಗಳ ಕಡೆಗೆ ಬದಲಾಗುತ್ತಿರುವಂತಿದೆ. ಇದಕ್ಕೆ ಕಾರಣ ಒಳ್ಳೆಯ ಹಣಕಾಸಿನ ಬೆಂಬಲ. ಮಧ್ಯಾಹ್ನದಲ್ಲಿ ನೀವು ಏಕಾಂಗಿಯಾಗಿ ಕೊಂಚ ಸಮಯ ಕಳೆಯಲು ಬಯಸಬಹುದು. ಸಂಜೆಗೆ ನೀವು ನಿಮ್ಮ ದೃಷ್ಟಿಕೋನ ಬಯಸುವ ಜನರ ನಡುವೆ ಕೇಂದ್ರಸ್ಥಾನದಲ್ಲಿ ಕಾಣುತ್ತೀರಿ.

ಸಿಂಹ: ಯಾವುದೇ ಬಗೆಯ ಕುಟಿಲತೆಗೆ ಮತ್ತು ಕೆಟ್ಟ ವಿಷಯಗಳಿಗೆ ಅವಕಾಶ ನೀಡಬೇಡಿ. ಕೆಲಸದ ವಿಷಯದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ದಿನದ ಅಂತ್ಯಕ್ಕೆ ನೀವು ನಿಮಗೆ ತೊಂದರೆ ಕೊಡುತ್ತಿರುವ ಪ್ರಶ್ನೆಗಳಿಗೆ ಕೆಲ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯತೆ ಇದೆ. ಶಾಂತವಾಗಿರಿ ಮತ್ತು ಪ್ರತಿಯೊಂದು ಕೂಡಾ ತಾನಾಗಿಯೇ ಪರಿಹಾರವಾಗುತ್ತದೆ.

ಕನ್ಯಾ:ಇಂದು ನಿಮ್ಮ ಬಹುತೇಕ ಗಮನ ನಿಮ್ಮ ಹಣಕಾಸಿನ ಲಾಭಗಳಿಗೆ ಹೋಗುತ್ತದೆ. ನೀವು ಭವಿಷ್ಯವನ್ನು ಯೋಜಿಸುತ್ತಿರಬಹುದು. ಬಿಕ್ಕಟ್ಟಿಗೆ ಸಜ್ಜಾಗುತ್ತಿರಬಹುದು. ನಿಮ್ಮ ತಾರೆಗಳ ಸೂಚನೆಯ ಪ್ರಕಾರ ಕೆಲ ಕಾಗದಪತ್ರಗಳು ಸದ್ಯದಲ್ಲೇ ನಿಮ್ಮ ಭವಿಷ್ಯದ ಮೈಲಿಗಲ್ಲುಗಳನ್ನು ನಿರ್ಧರಿಸಬಹುದು.

ತುಲಾ: ಈ ದಿನ ನಿಮಗೆ ಅದೃಷ್ಟದಿಂದ ಕೂಡಿರುವಂತೆ ಕಾಣುತ್ತದೆ. ನ್ಯಾಯಾಲಯದ ಹೊರಗೆ ಒಪ್ಪಂದಗಳಿಂದ ಕಾನೂನು ಸಂಘರ್ಷಗಳು ಮುಂಚೆಯೇ ಇತ್ಯರ್ಥವಾಗುವ ಸಾಧ್ಯತೆಗಳಿವೆ. ಮಧ್ಯಾಹ್ನದಲ್ಲಿ ನೀವು ಯಾರದೋ ದೃಷ್ಟಿಕೋನಕ್ಕೆ ನಿಮ್ಮನ್ನು ನೀವು ಶರಣಾಗಿಸಲು ಒಪ್ಪುವುದಿಲ್ಲ. ವೈಯಕ್ತಿಕ ಬಾಂಧವ್ಯಗಳ ಕುರಿತಂತೆ ನೀವು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತೀರಿ.

ವೃಶ್ಚಿಕ:ನಿಮ್ಮ ಈ ದಿನ ಸಂಪೂರ್ಣ ಕುಣಿ ಕುಣಿದಾಡುವ ದಿನವಾಗಿದೆ. ನೀವು ಇಡೀ ದಿನ ನಾಗಾಲೋಟದಲ್ಲಿರುವ ಸಾಧ್ಯತೆ ಇದೆ. ನಿಮ್ಮ ಬಹುತೇಕ ಆಲೋಚನೆಗಳು ವ್ಯಾಪಾರ ಸಭೆಗಳು ಮತ್ತು ಅಪೂರ್ಣ ವಿಷಯಗಳ ಸುತ್ತ ಸುತ್ತುತ್ತಿರುತ್ತದೆ. ಆದರೆ ದಿನದ ಅಂತ್ಯಕ್ಕೆ ನೀವು ನಿಮ್ಮ ಪ್ರಸ್ತಾವನೆ ಒಂದು ರೂಪ ಪಡೆಯುವ ಮತ್ತು ಪ್ರತಿಫಲ ನೀಡುವುದನ್ನು ಕಾಣಬಹುದು.

ಧನು:ಹಲವು ಮಹತ್ತರ ವಿಸ್ಮಯಗಳು ತೆರೆದುಕೊಳ್ಳಲಿವೆ. ಅಂತಿಮವಾಗಿ ನಿಮ್ಮ ಗಮನ ಅಗತ್ಯವಾಗಿರುವ ವಿಷಯಗಳ ನೇರ ಮುಖಾಮುಖಿಯಾಗುತ್ತವೆ. ಇಂದು ನೀವು ನಿರ್ಮಿಸಿಕೊಳ್ಳುವ ಯಾವುದೇ ಬಾಂಧವ್ಯ, ಜೀವನಪೂರ್ತಿ ಉಳಿಯುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅತ್ಯಂತ ಉತ್ತಮವಾಗಿ ಸಂಪರ್ಕ ಪಡೆದುಕೊಳ್ಳಲು ಶಕ್ತರಾಗುತ್ತೀರಿ, ಕೃತಜ್ಞತೆಯಿಂದ ತುಂಬಿರುತ್ತೀರಿ. ನೀವು ಭಾವಿಸುವ ಪ್ರೀತಿ ಭೌತಿಕ ಪ್ರೀತಿಗಿಂತ ಹೆಚ್ಚಿನದಾಗಿದೆ.

ಮಕರ:ಕೆಲಸದ ಭಾರದಿಂದ ನೀವು ಬಹಳ ಒತ್ತಡದ ಭಾವನೆ ಅನುಭವಿಸುತ್ತೀರಿ. ಆದರೆ ವೃತ್ತಿಪರರಾಗಿ ನೀವು ಸುಲಭವಾಗಿ ಕೈ ಬಿಡುವವರಲ್ಲ. ಇಂದು ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ದಾರಿಯಲ್ಲಿ ಬೆಂಬಲ ಸೂಚಿಸುತ್ತಾರೆ.

ಕುಂಭ:ಪ್ರಾರಂಭಿಕದಲ್ಲಿ ನಿಮಗೆ ಕೆಲಸ ಮಾಡಲು ಶಕ್ತಿಯೇ ಇಲ್ಲ ಎಂದು ಭಾವಿಸುತ್ತೀರಿ ಮತ್ತು ಅದಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ಆದರೆ ಇದು ಬೇಗ ಸುಧಾರಣೆಯಾಗುತ್ತದೆ. ನಿಮ್ಮ ಸುತ್ತಲಿನ ಶುಭಸುದ್ದಿ ದೊರೆಯುತ್ತದೆ. ನೀವು ಇರುವ ಸ್ಥಾನ ಕಾಪಾಡಿಕೊಳ್ಳಲು ಎಚ್ಚರದಿಂದಿರಿ ಮತ್ತು ಎಲ್ಲಾ ಸಮಯಗಳಲ್ಲೂ ನಿಮ್ಮ ಗಡುವುಗಳನ್ನು ಮುಟ್ಟಿರಿ.

ಮೀನ:ನಿಮ್ಮ ತಾರೆಗಳು ನಿಮ್ಮ ವ್ಯಾಪಾರಕ್ಕೆ ಗಮನ ನೀಡುವುದಕ್ಕಿಂತ ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ ಎಂದು ತೋರುತ್ತಿವೆ. ಈ ದಿನ ಸಂಪೂರ್ಣ ನಿಮಗೆ ಅನುಕೂಲಕರವಾಗಬಹುದು. ಕೆಲಸದ ವಿಷಯದಲ್ಲಿ ನೀವು ವಿಭಿನ್ನ ರೀತಿಯ ಉತ್ಸಾಹ ಅನುಭವಿಸುತ್ತೀರಿ. ಅತ್ಯುತ್ತಮವಾದುದರ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನೂ ಇಲ್ಲ.

ABOUT THE AUTHOR

...view details