ಮೇಷ: ಇಂದು ನೀವು ಅತ್ಯಂತ ಸೂಕ್ಷ್ಮ ಅಥವಾ ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಅಲೆಯ ವಿರುದ್ಧ ಈಜಲು ಬಯಸುತ್ತೀರಿ, ಅದು ಅಷ್ಟೇನೂ ಉಪಯುಕ್ತವಾದುದಲ್ಲ. ಯಾವುದೂ ನಿಮಗೆ ಅನುಕೂಲಕರವಾಗಿರುವಂತೆ ಕಾಣುವುದಿಲ್ಲ. ಒತ್ತಡದಿಂದ ನಿರಾಳಗೊಳ್ಳಲು ನೀವು ನಿಮಗಾಗಿ ಕೊಂಚ ಸಮಯ ತೆಗೆದುಕೊಳ್ಳಿರಿ.
ವೃಷಭ: ನಿಮ್ಮ ಚಿಂತನಾಶಕ್ತಿ ಇಂದು ಅತ್ಯಂತ ದುರ್ಬಲವಾಗಿದೆ. ನಿಮ್ಮ ಸ್ವಾಮ್ಯತೆ ಸಂಘರ್ಷಕ್ಕೆ ಕಾರಣವಾಗಬಹುದು. ಅನಗತ್ಯ ಸಂಕೀರ್ಣಗಳನ್ನು ತಪ್ಪಿಸಲು ನಿಮ್ಮ ಕೋಪವನ್ನು ನಿಯಂತ್ರಿಸಿ. ಆತ್ಮಾವಲೋಕನ ನಿಮ್ಮ ಚಿಂತನೆಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ನಿಮ್ಮ ಸಮಸ್ಯೆಗಳನ್ನು ಕಂಡುಕೊಳ್ಳಲು ಮತ್ತು ಪರಿಹಾರಗಳನ್ನು ಚಿಂತಿಸಲು ಅವಕಾಶ ಕಲ್ಪಿಸುತ್ತದೆ.
ಮಿಥುನ:ನೀವು ಎಲ್ಲದರಿಂದ ವಿಮುಖರಾಗಿರುವಂತೆ ಭಾವಿಸುತ್ತೀರಿ. ಇದು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ದೂರ ಉಂಟು ಮಾಡಬಹುದು. ನಿಮ್ಮ ಕೋಪದಿಂದಾಗಿ ನೀವು ಅನಗತ್ಯ ಚರ್ಚೆಗಳಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು.
ಕರ್ಕಾಟಕ:ಕಲ್ಪನಾಲೋಕದಲ್ಲಿ ಮುಳುಗಿಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಮೆಚ್ಚಿಕೊಳ್ಳುತ್ತಾರೆ. (ನಿಮ್ಮ ಪ್ರಯತ್ನಗಳಿಗೆ ಶ್ಲಾಘನೆ). ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು ದೇವರ ಆಶೀರ್ವಾದವೂ ಇರುತ್ತದೆ.
ಸಿಂಹ: ನೀವು ಇಂದು ನಿಮ್ಮ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕೆಲಸದಲ್ಲಿ ಕಳೆದರೂ, ನಿಮಗೆ ಆಶ್ಚರ್ಯಗೊಳಿಸಲು ಸಕಾರಾತ್ಮಕ ಫಲಿತಾಂಶಗಳು ಕಾಯುತ್ತಿವೆ. ಕಛೇರಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಬುದ್ಧತೆ ಮತ್ತು ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಪವಿತ್ರ ದಿನದಂದು ವ್ಯಾಪಾರವು ಮಹತ್ತರ ಪುರಸ್ಕಾರಗಳು ಹಾಗೂ ಲಾಭಗಳನ್ನು ತಂದುಕೊಡಲಿದೆ.
ಕನ್ಯಾ: ಇಲ್ಲಿಯವರೆಗೂ ನೀವು ತಡೆಹಿಡಿದಿದ್ದ ಭಾವನೆಗಳು ಇಂದು ಹೊರಗಡೆ ನುಗ್ಗಲು ದಾರಿ ಕಂಡುಕೊಳ್ಳಬಹುದು. ನೀವು ಕೈಗೆ ಸಿಗುವ ವಸ್ತುಗಳ ಕುರಿತು ಭಾವನೆಗಳನ್ನು ಬೆಳೆಸಿಕೊಂಡು ಅವುಗಳಿಗೆ ಬಾಂಧವ್ಯ ಬೆಳೆಸಿಕೊಳ್ಳಬಹುದು. ನೀವಿರುವ ಪರಿಸರ ನಿಮ್ಮ ಇಷ್ಟಕ್ಕೆ ಅನುಗುಣವಾಗಿಲ್ಲದೇ ಇರುವುದರಿಂದ ವಿಶ್ರಾಂತಿರಾಹಿತ್ಯದ ಭಾವನೆ ಹೊಂದಬಹುದು.