ಮೇಷ: ಇಂದು ನೀವು ಯಶಸ್ಸು ಪಡೆಯುತ್ತೀರಿ ಮತ್ತು ಅದನ್ನು ದೈವಿಕ ಬೆಂಬಲವಿಲ್ಲದೆ ನಿಮ್ಮದೇ ಪರಿಶ್ರಮದಿಂದ ಮಾಡುತ್ತೀರಿ. ನೀವು ವಿಜ್ಞಾನ ಅಥವಾ ಕಲಾ ವಿದ್ಯಾರ್ಥಿಗಳಾಗಿರಬಹುದು, ಆದರೆ ವಿಷಯದ ಆಳ ಜ್ಞಾನದಿಂದ ಮಾತ್ರ ಶ್ರೇಷ್ಠರಾಗುತ್ತೀರಿ. ನೀವು ನಂತರ ಓದಲು ನಿರ್ಧರಿಸುವ ಸಾಧ್ಯತೆಗಳಿವೆ.
ವೃಷಭ:ನೀವು ಇತರರನ್ನು ಮೆಚ್ಚಿಸಲು ಅಥವಾ ಪ್ರಭಾವ ಬೀರಲು ಕಷ್ಟ ಎಂದು ಕಾಣುತ್ತೀರಿ. ನೀವು ಒಳ್ಳೆಯದನ್ನು ಮಾಡಲು ಬಯಸಿದ್ದರೂ ಪ್ರಾರಂಭಿಕ ಹಿನ್ನಡೆಗಳನ್ನು ಅನುಭವಿಸಬಹುದು, ಆದರೆ ನೀವು ನಂತರ ಯಶಸ್ವಿಯಾಗುತ್ತೀರಿ.
ಮಿಥುನ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಇಡೀ ದಿನ ಒತ್ತಡದಲ್ಲಿ ಇರಿಸುತ್ತವೆ. ನೀವು ಕಡ್ಡಾಯವಾಗಿ ಕೆಲ ಸಾಮಾಜಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಬೇಕು. ನೀವು ಸೇವೆ ಮತ್ತು ದತ್ತಿ ಕೆಲಸದಲ್ಲಿ ವೆಚ್ಚಗಳನ್ನು ಎದುರಿಸುತ್ತೀರಿ. ವ್ಯಾಪಾರ ವ್ಯವಹಾರಗಳಿಗೆ ಇದು ಒಳ್ಳೆಯ ಸಮಯ.
ಕರ್ಕಾಟಕ: ನೀವು ಕೆಲ ಸಾಮಾನ್ಯ ಸನ್ನಿವೇಶಗಳನ್ನು ಅಸಾಮಾನ್ಯ ರೀತಿಯಲ್ಲಿ ನಿಭಾಯಿಸಲು ಸಜ್ಜಾಗಬೇಕು. ನೀವು ಈ ಮಧ್ಯಾಹ್ನ ಸಾರ್ವಜನಿಕ ಮನಃಶಾಸ್ತ್ರದಲ್ಲಿ ಹೊಸ ಪಾಠಗಳನ್ನು ಕಲಿಯಬಹುದು. ಆದರೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಪೂರ್ವಾಗ್ರಹಗಳಿಲ್ಲದೆ ಸರಿ ತಪ್ಪುಗಳನ್ನು ಅಳೆಯಿರಿ.
ಸಿಂಹ: ನೀವು ಇಂದು ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ನಿಮ್ಮ ಮೂಡ್ ಏರಿಳಿತ ಮುಖ್ಯವಾಗಿ ಬೆಳಿಗ್ಗೆ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂದು ನೀವು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವ್ಯಸ್ತರಾಗಿರುತ್ತೀರಿ. ಮತ್ತು ಇದು ನಿಮ್ಮ ಒತ್ತಡಗಳಿಗೆ ಸೇರ್ಪಡೆಯಾಗುತ್ತದೆ. ಆದಾಗ್ಯೂ, ಒಂದು ಅಥವಾ ಎರಡು ದಿನಗಳಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತೀರಿ.
ಕನ್ಯಾ: ಕ್ಷುಲ್ಲಕ ವಿಷಯಗಳಿಗೆ ಸಿಡಿಯಬೇಡಿ, ಅದು ಆತ್ಮೀಯ ಬಾಂಧವ್ಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ನ್ಯಾಯಾಲಯದ ಹೊರಗಿನ ಇತ್ಯರ್ಥ ಎಲ್ಲ ಕಾನೂನು ಸಮಸ್ಯೆಗಳನ್ನು ನಿವಾರಿಸುತ್ತದೆ. ಸಂಜೆಗಳಲ್ಲಿ ಮುಕ್ತವಾಗಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿರಿ ಮತ್ತು ಆನಂದಿಸಿರಿ.